ಹಣಕಾಸಿನ ಹೂಡಿಕೆಯಿಂದ ದೇಶದ ಆರ್ಥಿಕ ಅಭಿವೃದ್ಧಿ

rbk 26-2 upnyasa
ಬನಹಟ್ಟಿ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ ಲೈವ ಟ್ರೇಡಿಂಗ್ ಇನ್ ಸ್ಟಾಕ್ ಮಾರ್ಕೆಟ್ ವಿಷಯ ಕುರಿತು ಜಮಖಂಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಎಸ್.ಪಿ. ಸಜ್ಜನ ವಿಶೇಷ ಉಪನ್ಯಾಸ ನೀಡಿದರು. ಪ್ರಾಚಾರ್ಯ ಜಿ. ಆರ್. ಜುನ್ನಾಯ್ಕರ, ಗೀತಾ ಸಜ್ಜನ ಇದ್ದರು.
Published on

ರಬಕವಿ/ಬನಹಟ್ಟಿ: ಇಂದಿನ ದಿನಗಳಲ್ಲಿ ಹಣಕಾಸಿನ ಹೂಡಿಕೆಗಳಲ್ಲಿ ಬಹಳಷ್ಟು ಜಾಗೃತಿ ವಹಿಸಬೇಕು. ನಮ್ಮ ದೇಶದ ಜನರು ಕೇವಲ ಸಾಂಪ್ರದಾಯಿಕ ಹಣಕಾಸಿನ ಹೂಡಿಕೆಯಲ್ಲಿ ಮಾತ್ರ ತೊಡಗಿದ್ದಾರೆ. ವಿದ್ಯಾವಂತರಲ್ಲಿಯೂ ಆಧುನಿಕ ಹಣಕಾಸಿನ ಹೂಡಿಕೆಯ ಜಾಗೃತಿ ಅಗತ್ಯವಾಗಿದೆ ಎಂದು ಜಮಖಂಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಎಸ್.ಪಿ. ಸಜ್ಜನ ತಿಳಿಸಿದರು.

ಬನಹಟ್ಟಿ ಎಸ್‌ಟಿಸಿ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ ಲೈವ ಟ್ರೇಡಿಂಗ್ ಇನ್ ಸ್ಟಾಕ್ ಮಾರ್ಕೆಟ್ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾಗತಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕು. ಸೂಕ್ತ ಮತ್ತು ಲಾಭದಾಯಕ ಕಂಪನಿಗಳಲ್ಲಿ ಹೂಡಿಕೆ ಮಾಡುವುದರಿಂದ ದೇಶವು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರೊಂದಿಗೆ ಹೂಡಿಕೆದಾರರೂ ಆರ್ಥಿಕವಾಗಿ ಸಭಲರಾಗುತ್ತಾರೆ ಎಂದರು.

ದೇಶದ ಆರ್ಥಿಕ ಅಭಿವೃದ್ಧಿಯಿಂದ ಉದ್ದಿಮೆಗಳು ಹೆಚ್ಚುತ್ತವೆ. ಇದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಉದ್ಯೋಗಾವಕಾಶಗಳ ಹೆಚ್ಚಳದಿಂದಾಗಿ ದೇಶದ ಜನರ ಜೀವನಮಟ್ಟ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಪ್ರಾಚಾರ್ಯ ಜಿ.ಆರ್. ಜುನ್ನಾಯ್ಕರ್ ಮಾತನಾಡಿ, ಕಾಲೇಜುಗಳಲ್ಲಿ ನಡೆಯುವ ವಿಶೇಷ ಉಪನ್ಯಾಸಗಳ ಸದ್ಬಳಕೆಯನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು. ವಿಶೇಷ ಉಪನ್ಯಾಸಗಳು ನಮ್ಮಲ್ಲೂ ಜ್ಞಾನ ಹೆಚ್ಚಿಸುತ್ತವೆ ಎಂದರು.

ವಾಣಿಜ್ಯ ವಿಭಾಗದ ಮಖ್ಯಸ್ಥೆ ಗೀತಾ ಸಜ್ಜನ, ಐಕ್ಯೂಎಸ್ಸಿ ಸಂಯೋಜಕ ಪ್ರಕಾಶ ಕೆಂಗನಾಳ, ಸುವರ್ಣಾ ವರದಾಯಿ, ಶ್ವೇತಾ ಮಠದ, ವಿಶ್ವಜ ಕಾಡದೇವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net