ವೈಜ್ಞಾನಿಕ ಕೃಷಿ ಪದ್ದತಿಯಿಂದ ಅರ್ಥಿಕ ಲಾಭ

3MDG3
Published on

ಮೂಡಿಗೆರೆ: ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳ ಸದ್ಬಳಕೆಯಾಗಬೇಕಾದರೆ ಜನರು ಹೆಚ್ಚಿನ ಆಸಕ್ತಿಯೊಂದಿಗೆ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಗೋಣಿಬೀಡು ಗ್ರಾಪಂ ಅಧ್ಯಕ್ಷ ದಿನೇಶ್ ಹೇಳಿದರು.

ಗೋಣಿಬೀಡು ಸಮೀಪದ ಕಲ್ಲುಗುಡ್ಡ ಗ್ರಾಮದಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪ.ಜಾತಿ ಉಪ ಯೋಜನೆಯಡಿ ಒಂದು ದಿನದ ಸಮಗ್ರ ಕೃಷಿಯ ಕುರಿತು ರೈತರಿಗೆ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ವಿಜ್ಞಾನಿಗಳಿಂದ ಸಲಹೆ ಸಹಕಾರ ಪಡೆದು ತಮ್ಮ ಜಮೀನಿನಲ್ಲಿ ವೈಜ್ಞಾನಿಕ ಕೃಷಿಯಲ್ಲಿ ತೊಡಗಿದರೆ ಆರ್ಥಿಕ ಲಾಭ ಪಡೆದುಕೊಳ್ಳಲು ಸಾಧ್ಯ ಎಂದರು.

ಮಣ್ಣಿನ ಫಲವತ್ತತೆ ಪರೀಕ್ಷೆ, ಪೋಷಕಾಂಶಗಳ ಬಳಕೆ ವಿಧಾನ, ಹವಾಮಾನಕ್ಕೆ ಅನುಗುಣವಾಗಿ ಬೆಳೆಯಬೇಕಾಗಿರುವ ತಳಿಗಳು, ಅದಕ್ಕೆ ಬೇಕಾಗಿರುವ ಬಿತ್ತನೆ ಬೀಜಗಳು, ಇವೆಲ್ಲದರ ಮಾಹಿತಿಯನ್ನು ಕೃಷಿ ವಿಜ್ಞಾನಿಗಳಿಂದ ಪಡೆದರೆ ಜಮೀನು ಪಾಳು ಬಿಡುವುದು ತಪ್ಪುತ್ತದೆ ಎಂದು ತಿಳಿಸಿದರು.

ಪ್ರಧಾನ ಅನ್ವೇಷಕ ಮತ್ತು ತೋಟಗಾರಿಕಾ ಮಹಾವಿದ್ಯಾಲಯದ ಬೇಸಾಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಂ.ವೈ.ಉಲ್ಲಾಸ್ ಅಡಕೆ ಬೆಳೆಯಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಪ.ಜಾತಿ ಉಪ ಯೋಜನೆಯಡಿ ಪ.ಜಾತಿಯ ರೈತರಿಗೆ ಕುರಿ, ಕೋಳಿ ಸಾಕಾಣಿಕೆ ಮತ್ತು ಹೈನುಗಾರಿಕೆ ಕುರಿತು ಮೂಡಿಗೆರೆಯ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಸದ್ಯದಲ್ಲೆ ಆಯೋಜಿಸಲಾಗುವುದು.

ಕೃಷಿ ವಿಜ್ಞಾನಿ ಡಾ.ಎ.ಬಿ.ಸುನಿತಾ, ಪ್ರಗತಿಪರ ರೈತರದ ಗೌತಳ್ಳಿ ಗ್ರಾಮದ ಉದ್ದಯ್ಯ, ಹರ್ಷ, ಚಿನ್ನಿಗ ಗ್ರಾಮದ ಕೃಷಿಕ ನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net