ಹೈನುಗಾರಿಕೆಯಿಂದ ಆರ್ಥಿಕ ಲಾಭ

28Anand3
ಮತ್ತಿಕೊಪ್ಪದ ಐಸಿಎಆರ್​&ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಡಾ. ಮಂಜುನಾಥ ಚೌರಡ್ಡಿ, ಡಾ.ಎಸ್​.ಎಸ್​. ಹಿರೇಮಠ, ಎಸ್​.ಎಂ.ವಾರದ, ಜಿ.ಬಿ.ವಿಶ್ವನಾಥ ಹಾಗೂ ಪ್ರವಿಣ ಯಡಹಳ್ಳಿ ಇತರರಿದ್ದರು.
Published on

ಬೆಳಗಾವಿ: ರೈತರು ಕೃಷಿ ಜತೆಗೆ ಹೈನುಗಾಕೆಯಲ್ಲಿ ತೊಡಗಿ ಆರ್ಥಿಕ ಲಾಭ ಗಳಿಸಬೇಕು ಎಂದು ಮತ್ತಿಕೊಪ್ಪದ ಐಸಿಎಆರ್​&ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ಹೇಳಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್​&ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರ ಈಚೆಗೆ ಆಯೋಜಿಸಿದ್ದ ರೈತರಿಗೆ ಮೂರು ದಿನಗಳ ಹೈನೋದ್ಯಮ ಹಾಗೂ ಪಶುಸಂಗೋಪನೆಯಲ್ಲಿ ಉದ್ಯಮಶೀಲತೆ ಹಾಗೂ ಆರು ದಿನಗಳ ಕೃಷಿ ಸಖಿ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ರೈತರು ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ ನೀಡಬೇಕು. ಕೃಷಿ ವಿಜ್ಞಾನ ಕೇಂದ್ರದಲ್ಲಿ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ತಂತ್ರಜ್ಞಾನ ಒಳಗೊಂಡ ಉತ್ತಮ ತರಬೇತಿ ನೀಡಲಾಗಿದೆ. ಶಿಬಿರಾರ್ಥಿಗಳು ಲಾಭ ಪಡೆದು ಉತ್ತಮ ಉದ್ಯಮಿಯಾಗಬೇಕು. ಕೃಷಿ ಸಖಿಯರು ಹೈನುಗಾರಿಕೆ ಜತೆಗೆ ಪ್ರತಿ ಗ್ರಾಪಂನಲ್ಲಿ ಬರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದರು. ವಿಜ್ಞಾನಿಗಳಾದ ಡಾ.ಎಸ್​.ಎಸ್​. ಹಿರೇಮಠ, ಎಸ್​.ಎಂ.ವಾರದ, ಜಿ.ಬಿ.ವಿಶ್ವನಾಥ ಹಾಗೂ ಪ್ರವಿಣ ಯಡಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net