ಆರ್ಥಿಕವಾಗಿ ಹಿಂದುಳಿದವರಿಗೆ ವರದಾನ

19 KAMPLI 04
ಕಂಪ್ಲಿಯಲ್ಲಿ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ತಹಸೀಲ್ದಾರ ಎಸ್.ಶಿವರಾಜ್ ಉದ್ಘಾಟಿಸಿದರು. ಪ್ರಮುಖರಾದ ಮುಕ್ಕುಂದಿ ಶಿವಗಂಗಮ್ಮ ಭತ್ತದ ಸಂಧ್ಯಾ, ಬಿ.ಎಂ.ಪುಷ್ಪಾ ರುದ್ರಯ್ಯಸ್ವಾಮಿ, ಕೆ.ಎಂ.ಸೌಮ್ಯಾವಾಗೀಶ, ತಾಂಡೂರು ಸುಜಾತ, ಸಂದೀಪ್ ಐತಾಳ್ ಇತರರಿದ್ದರು.
Published on

ಕಂಪ್ಲಿ: ಇಲ್ಲಿನ ಅಕ್ಕಮಹಾದೇವಿ ಮಹಿಳಾ ಮಂಡಳಿ ಮತ್ತು ಹೊಸಪೇಟೆ ಐ ದೃಷ್ಟಿ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ಬುಧವಾರ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರಕ್ಕೆ ತಹಸೀಲ್ದಾರ್ ಎಸ್.ಶಿವರಾಜ ಚಾಲನೆ ನೀಡಿದರು.

ನಂತರ ಮಾತನಾಡಿ, ಅಕ್ಕನ ಬಳಗದವರು ನಿರಂತರ ಸಮಾಜಮುಖಿ ಸೇವೆಗಳಲ್ಲಿ ತೊಡಗಿಕೊಂಡಿರುವುದು ಸ್ವಾಗತಾರ್ಹ. ಉಚಿತ ನೇತ್ರ ತಪಾಸಣೆ ಶಿಬಿರ ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿದೆ ಎಂದರು.

ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ ಮಾತನಾಡಿ, ಶಿಬಿರದಲ್ಲಿ 150ಜನರ ಕಣ್ಣಿನ ತಪಾಸಣೆ ಮಾಡಿದ್ದು, ಇದರಲ್ಲಿ 10ಜನರಿಗೆ ಕಣ್ಣಿನ ಪೊರೆ ಕಾಣಿಸಿದೆ. 15ಜನರಿಗೆ ಸಮೀಪದ ದೃಷ್ಟಿ, 25ಜನರಿಗೆ ದೂರದೃಷ್ಟಿ ಇರುವುದು ಪತ್ತೆಯಾಗಿದೆ ಎಂದರು.

ಹೊಸಪೇಟೆಯ ಐ ದೃಷ್ಟಿ ಕಣ್ಣಿನ ಆಸ್ಪತ್ರೆ ತಜ್ಞ ಸಂದೀಪ್ ಐತಾಳ್, ಟೆಕ್ನೀಷಿಯನ್ ಇಮ್ರಾನ್, ವೀರಶೈವ ಸಂಘದ ಕಾರ್ಯದರ್ಶಿ ಎಸ್.ಎಂ.ನಾಗರಾಜ, ಮಹಿಳಾ ಮಂಡಳಿ ಉಪಾಧ್ಯಕ್ಷೆ ಭತ್ತದ ಸಂಧ್ಯಾ, ಕಾರ್ಯದರ್ಶಿ ಬಿ.ಎಂ.ಪುಷ್ಪಾ ರುದ್ರಯ್ಯಸ್ವಾಮಿ, ಸಹ ಕಾರ್ಯದರ್ಶಿ ಕೆ.ಎಂ.ಸೌಮ್ಯಾವಾಗೀಶ, ಖಜಾಂಚಿ ತಾಂಡೂರು ಸುಜಾತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net