ಧರ್ಮಮಾರ್ಗದ ಆರ್ಥಿಕಚಟುವಟಿಕೆ ದೇಶಕ್ಕೆ ಹಿತ

18 ckm 1
ಚಿಕ್ಕಮಗಳೂರಿನ ಬೈಪಾಸ್ ರಸ್ತೆಯ ವೀರಶೈವ ಮಹಾಸಭಾ ಕಟ್ಟಡದಲ್ಲಿ ಆರಂಭಿಸಿರುವ ಪಟ್ಟಣ ಸಹಕಾರ ಬ್ಯಾಂಕ್ ಮೊದಲ ಶಾಖೆಗೆ ಶ್ರೀ ರಂಭಾಪುರಿ ಜಗದ್ಗುರುಗಳು ಭೇಟಿ ನೀಡಿ ಆಶೀರ್ವದಿಸಿದರು. ಈ ವೇಳೆ ಶ್ರೀಗಳಿಗೆ ಗುರುವಂದನೆ ಸಲ್ಲಿಸಲಾಯಿತು.
Published on

ಚಿಕ್ಕಮಗಳೂರು: ಧರ್ಮಮಾರ್ಗದಲ್ಲಿ ಆರ್ಥಿಕ ಚಟುವಟಿಕೆಗಳನ್ನು ನಡೆಸಿದರೆ ದೇಶಕ್ಕೆ ಹಿತಕಾರಿ. ಸಹಕಾರಿ ಬ್ಯಾಂಕ್‌ಗಳು ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುತ್ತಿವೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ನಗರದ ಪಟ್ಟಣ ಸಹಕಾರ ಬ್ಯಾಂಕ್ ನಗರ ಹೊರವಲಯ ಬೈಪಾಸ್ ರಸ್ತೆಯ ವೀರಶೈವ ಮಹಾಸಭಾ ಕಟ್ಟಡದಲ್ಲಿ ಆರಂಭಿಸಿರುವ ಮೊಟ್ಟಮೊದಲ ಶಾಖೆಗೆ ಭೇಟಿನೀಡಿ ಆಶೀರ್ವದಿಸಿದ ಅವರು, ಜನರ ಅಗತ್ಯತೆಗಳಿಗೆ ಬ್ಯಾಂಕ್ ಸ್ಪಂದಿಸುವAತಾಗಲಿ ಎಂದು ಆಶಿಸಿದರು.
ಆರ್ಥಿಕಾಭಿವೃದ್ಧಿಯಲ್ಲಿ ಸಹಕಾರಿ ಬ್ಯಾಂಕ್‌ಗಳು ಮಹತ್ವದ ಪಾತ್ರ ವಹಿಸುತ್ತಿವೆ. ಜನಸಾಮಾನ್ಯರ ವ್ಯಾಪಾರ, ಕೃಷಿ, ಕೈಗಾರಿಕೆ, ಉದ್ದಿಮೆ ಸೇರಿದಂತೆ ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕುಗಳು ಸ್ಪಂದಿಸಬೇಕು. ವಾಹನ ಖರೀದಿ, ಗೃಹನಿರ್ಮಾಣ ಸೇರಿದಂತೆ ಸೌಕರ್ಯಗಳ ವಿಸ್ತರಣೆಗೂ ಜನ ಬ್ಯಾಂಕ್‌ಗಳನ್ನು ಅವಲಂಬಿಸಿರುತ್ತಾರೆ. ಆದಾಯ ದುಡಿಮೆಗೆ ಅನುಗುಣವಾಗಿ ಬ್ಯಾಂಕ್‌ಗಳ ಮೂಲಕ ವ್ಯವಹರಿಸಿದರೆ ಉತ್ತಮ. ಧರ್ಮಮಾರ್ಗದಲ್ಲಿ ಆರ್ಥಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಸಹಕಾರ ಬ್ಯಾಂಕ್ ಅಭಿವೃದ್ಧಿಪಥದಲ್ಲಿ ಸಾಗಲಿ ಎಂದು ಅಶೀರ್ವದಿಸಿದರು.
ಚಿಕ್ಕಮಗಳೂರು ಪಟ್ಟಣಸಹಕಾರ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ನಂಜೇಗೌಡ ಮಾತನಾಡಿ, ಗ್ರಾಹಕರಿಗೆ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಮುಂದಾಗಿರುವ ಬ್ಯಾಂಕ್ ಲಾಭದಾಯಕವಾಗಿದೆ. ಸಂಪೂರ್ಣ ಗಣಕೀಕೃತ ವ್ಯವಹಾರ. ಪಿಗ್ಮಿ ಸಂಗ್ರಹ, ಪೇ ಆರ್ಡರ್, ಆರ್‌ಟಿಜಿಎಸ್, ನೆಪ್ಟ್ ಸೌಲಭ್ಯ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇತರೆ ಬ್ಯಾಂಕ್‌ಗಳಿಗಿAತ ಠೇವಣಿಗಳ ಮೇಲೆ ಅಧಿಕ ಬಡ್ಡಿ ನೀಡಲಾಗುತ್ತಿದೆ. ಡೆಪಾಜಿಟ್ ಇನ್ಯೂರೆನ್ಸ್ಗೂ ಒಳಪಟ್ಟಿದೆ. ಹಿರಿಯ ನಾಗರಿಕರಿಗೆ ಶೇ.೦.೫ಬಡ್ಡಿ ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಒಂದುವರ್ಷದಿAದ ಎರಡುವರ್ಷದೊಳಗಿನ ಸಾವಧಿ ಠೇವಣಿಗೆ ಶೇ.೮ರ ಬಡ್ಡಿ, ಎರಡುವರ್ಷದಿಂದ ಮೇಲ್ಪಟ್ಟ ಅವಧಿಗೆ ಶೇ. ೭ರಷ್ಟು ಬಡ್ಡಿ ನೀಡಲಾಗುತ್ತಿದೆ. ಸಖರಾಯಪಟ್ಟಣದಲ್ಲಿ ೨ನೆ ಶಾಖೆ ಆರಂಭಿಸುವ ಆಲೋಚನೆ ಇದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net