ವಿಜಯವಾಣಿ ಸುದ್ದಿಜಾಲ ಬೆಳ್ವೆ
ಪ್ರಕೃತಿಯ ಸಮತೋಲನವಿದ್ದಾಗ ಪರಿಸರದ ಬೆಳವಣಿಗೆ ಸಾಧ್ಯವಿದೆ. ಪ್ರತಿಯೊಬ್ಬರೂ ಗಿಡ ನಾಟಿ ವಾಡಿ ಪೋಷಿಸಿದರೆ ನಮ್ಮ ಮುಂದಿನ ಬದುಕು ಹಸನಾಗುತ್ತದೆ. ಈ ನಿಟ್ಟಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯವಾಗಬೇಕು ಎಂದು ಅರಣ್ಯ ಇಲಾಖೆ ಹೆಬ್ರಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕು.ಮಂಜುಳಾ ಹೇಳಿದರು.
ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ಹೆಬ್ರಿ ತಾಲೂಕು ಬೆಳ್ವೆ ವಲಯದ ಅಲ್ಬಾಡಿಯಲ್ಲಿ ಇತ್ತೀಚೆಗೆ ಪುನಶ್ಚೇತನಗೊಂಡ ಬಾರಮಕ್ಕಿ ಕೆರೆ ಆವರಣದಲ್ಲಿ ಕೆರೆಯಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾರಮಕ್ಕಿ ಕೆರೆ ಸಮಿತಿ ಅಧ್ಯಕ್ಷ ದಿನಕರ ಶೆಟ್ಟಿ ಗುಡ್ಡಿಮನೆ ಅಧ್ಯಕ್ಷತೆ ವಹಿಸಿದ್ದರು.
ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ, ಉಪಾಧ್ಯಕ್ಷ ಬಿ.ಹರೀಶ್ ಕಿಣಿ, ಬೆಳ್ವೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ವಸಂತಕುವಾರ್ ಶೆಟ್ಟಿ, ಸದಸ್ಯ ಸುರೇಶ ಶೆಟ್ಟಿ , ಬೆಳ್ವೆ ಗ್ರಾಪಂ ವಾಜಿ ಅಧ್ಯಕ್ಷ ಬಿ.ಉದಯ ಕುವಾರ್ ಪೂಜಾರಿ, ಅಲ್ಬಾಡಿ ಟಕ ಉಪ ವಲಯಾರಣ್ಯಾಧಿಕಾರಿ ಹೇವಾ, ಗಸ್ತು ಅರಣ್ಯ ಪಾಲಕರಾದ ಮಂಜುಳಾ, ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ಆರ್ಡಿ ಒಕ್ಕೂಟ ಅಧ್ಯಕ್ಷ ಕೃಷ್ಣ ಪುತ್ರನ್, ಅಲ್ಬಾಡಿ ಒಕ್ಕೂಟ ಅಧ್ಯಕ್ಷ ರವಿಚಂದ್ರ ನಾಯ್ಕ, ಮರೂರು ಒಕ್ಕೂಟ ಅಧ್ಯಕ್ಷ ಮಂಜುನಾಥ, ಕಲ್ಮರ್ಗಿ ಒಕ್ಕೂಟ ಅಧ್ಯಕ್ಷೆ ಜಯಂತಿ, ಬೆಳ್ವೆ ವಲಯ ಮೇಲ್ವಿಚಾರಕ ರಾವೇಂದ್ರ ಗೌಡ, ಕಷಿ ಅಧಿಕಾರಿ ಉಮೇಶ್ ಬಿ.ಕೆ., ಸೇವಾ ಪ್ರತಿನಿಧಿ ಪ್ರಶಾಂತ ಗುಮ್ಮೋಲ, ಜಯಲಕ್ಷ್ಮೀ ಮರೂರು, ಅಣ್ಣಪ್ಪ ಪೂಜಾರಿ, ಭೋಜ ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಯೋಜನಾಧಿಕಾರಿ ಲೀಲಾವತಿ ಸ್ವಾಗತಿಸಿ, ಸೇವಾ ಪ್ರತಿನಿಧಿ ಪ್ರಶಾಂತ ಗುಮ್ಮೋಲ ವಂದಿಸಿದರು. ಮೇಲ್ವಿಚಾರಕ ರಾವೇಂದ್ರ ಗೌಡ ನಿರೂಪಿಸಿದರು.