ಪರಿಸರ ಸ್ನೇಹಿ ಗೋಮಯ ಗಣೇಶ

eco ganapa new
Published on

ಮಂಗಳೂರು: ನಾಟಿ ಹಸುವಿನ ಸೆಗಣಿ, ಗಂಜಲ, ಹುಣಸೆ ಹಣ್ಣಿನ ನೀರು, ಅರಸಿನ ಮತ್ತು ಅಚ್ಚು ಬಳಸಿ ತಯಾರಿಸಿದ ಪೂರ್ಣ ಪ್ರಮಾಣದ ಪರಿಸರ ಸ್ನೇಹಿ ಗಣಪನ ವಿಗ್ರಹಗಳು ಈ ಬಾರಿ ಬೇಡಿಕೆ ಪಡೆದಿವೆ.

ಇದರಲ್ಲಿ ಮಣ್ಣು, ಪ್ಲಾಸ್ಟಿಕ್ ಅಥವಾ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತಿಲ್ಲ. ಕೇಂದ್ರದ ರಾಷ್ಟ್ರೀಯ ಕಾಮಧೇನು ಆಯೋಗದ ಶಿಫಾರಸಿನಂತೆ ಬೆಂಗಳೂರು ಮೂಲದ ಜಾಗೃತಿ ಟ್ರಸ್ಟ್ ಗೋಮಯ ಗಣೇಶನ ವಿಗ್ರಹ ತಯಾರಿ ಮತ್ತು ಪೂರೈಕೆಯ ಜವಾಬ್ದಾರಿ ನಿರ್ವಹಿಸುತ್ತಿದೆ. ಅಧಿಕ ಪ್ರಮಾಣದ ವಿಗ್ರಹಗಳ ಬೇಡಿಕೆ ಇರುವ ಕಡೆ ಟ್ರಸ್ಟ್‌ನ ವಾಹನದಲ್ಲೇ ಪೂರೈಕೆಯಾಗುತ್ತದೆ. ಕೊರಿಯರ್ ಮೂಲಕ ಕಳುಹಿಸುವ ವ್ಯವಸ್ಥೆ ಕೂಡ ಇದೆ.

ಪ್ರಸುತ ಟ್ರಸ್ಟ್ ಮೂಲಕ ರೈತರು ತಯಾರಿಸಿದ ಆರು ಮತ್ತು ಎಂಟು ಇಂಚಿನ 300ಕ್ಕೂ ಅಧಿಕ ಗಣಪತಿಯ ವಿಗ್ರಹಗಳು ಪೂರೈಕೆಯಾಗಿದ್ದು, ಹೆಚ್ಚುವರಿ 1000 ವಿಗ್ರಹಗಳಿಗೆ ಬೇಡಿಕೆ ಬಂದಿರುವುದಾಗಿ ಟ್ರಸ್ಟಿ ರವಿ ಕುಮಾರ್ ತಿಳಿಸಿದ್ದಾರೆ.

ಗೋಮಯ ಅಭಿಯಾನ ವರ್ಷಪೂರ್ತಿ ನಡೆಯಲಿದೆ. ನವರಾತ್ರಿಗೆ ದುರ್ಗಾ ಅಭಿಯಾನ, ದೀಪಾವಳಿ, ಯುಗಾದಿ ಮತ್ತಿತರ ಸಂದರ್ಭಗಳಲ್ಲಿ 100ಕ್ಕೂ ಅಧಿಕ ಗೋಮಯ ವಸ್ತುಗಳ ಉತ್ಪಾದನೆ ಮತ್ತು ಪೂರೈಕೆಯಾಗಲಿದೆ ಎಂದು ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಮಾಧವ ಎಂ.ಎಸ್.ಹೆಬ್ಬಾರ್(99005 11170) ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net