

ವಿಜಯವಾಣಿ ಸುದ್ದಿಜಾಲ ಲಕ್ಷೆ್ಮೕಶ್ವರ
ಪಟ್ಟಣದ ಸ್ಕೂಲ್ ಚಂದನದಲ್ಲಿ ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಖಗೋಳ ವಿಸ್ಮಯವನ್ನು ನೋಡಿ ಕಣ್ತುಂಬಿಕೊಂಡರು.
ಶಾಲೆಯ ಭಾರತರತ್ನ ಸಿಎನ್ಆರ್ ರಾವ್ ಸೈನ್ಸ್ ಪಾರ್ಕ್ನಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಸೋಲಾರ್ ಕನ್ನಡಕ, ಟೆಲಿಸ್ಕೋಪ್ ಮೂಲಕ ಗ್ರಹಣ ವೀಕ್ಷಿಸಿದರು.
ವಿದ್ಯಾರ್ಥಿಗಳಾದ ಪವನಕುಮಾರ ಮುದಗಲ್, ಸ್ಪೂರ್ತಿ ದೊಡ್ಡಮನಿ ಸೇರಿದ್ದ ವಿದ್ಯಾರ್ಥಿಗಳಿಗೆ ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದು ಚಂದ್ರನ ನೆರಳು ಸೂರ್ಯನನ್ನು ಆವರಿಸಿಕೊಂಡಾಗ ಗ್ರಹಣ ಉಂಟಾಗುತ್ತದೆ ಎಂಬುದನ್ನು ನೈಜವಾಗಿಯೇ ತೋರಿಸಿದರು. ಗ್ರಹಣಗಳು ನಭೋಮಂಡಲದಲ್ಲಿ ನೈಸರ್ಗಿಕವಾಗಿ ನಡೆಯುವ ಪ್ರಕ್ರಿಯೆಗಳು. ಇದನ್ನೇ ಕೆಲವರು ತಪ್ಪಾಗಿ ಅರ್ಥೈಸಿ ಜನರಲ್ಲಿನ ಮೌಢ್ಯತೆಗೆ ನೀರೆರೆದು ಪೋಷಿಸುತ್ತ ಬರುತ್ತಿದ್ದಾರೆ ಎಂದು ಶಿಕ್ಷಕರು ತಿಳಿಸಿದರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಟಿ. ಈಶ್ವರ, ನಿರ್ದೇಶಕರಾದ ಎಚ್.ಸಿ. ರಟಗೇರಿ, ಗಿರಿಜಾ ಟಿ. ಈಶ್ವರ, ಪ್ರಾಚಾರ್ಯ ಆರ್.ಜಿ. ಭಾವನವರ, ಇತರರು ಇದ್ದರು.