

ಹಾಸನ: ಎಚ್‌ಕೆಎಸ್ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ‘ಕ್ರಿಯೇಟಿವ್ ನುಡಿ ಹಬ್ಬ-2025’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಡಾ.ನಾ ಸೋಮೇಶ್ವರ ಮಾತನಾಡಿ, ಭಾರತೀಯ ಸಂಸ್ಕೃತಿಯ ಪರಂಪರೆ, ಕನ್ನಡದ ಉಗಮ, ಭಾರತೀಯ ನದಿ ಮೂಲಗಳ ಕುರಿತು ವಿವರಿಸಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಎಸ್.ಎಲ್. ಅಶ್ವತ್ ಕನ್ನಡ ಸಾಹಿತ್ಯದ ಕುರಿತು ಮಾತನಾಡಿದರು. ದ್ವಿತೀಯ ಪಿಯುಸಿ ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಜಿ.ವಿಮಲ್ ರಾಜ್, ಕಾರ್ಯದರ್ಶಿ ಎಚ್.ಎಸ್.ಪ್ರಶಾಂತ್ ಗೌಡ, ಪ್ರಾಂಶುಪಾಲ ಎ.ಪ್ರವೀಣ್, ಕನ್ನಡ ಉಪನ್ಯಾಸಕರಾದ ಲೋಕೇಶ್ ಪೂಜಾರಿ, ಎಂ.ರಮೇಶ್, ಜೆ.ಎನ್. ಶ್ರೀನಿವಾಸ್ ಇತರರು ಇದ್ದರು.