ಜಂಕ್‌ಫುಡ್ ಸೇವನೆ ಆರೋಗ್ಯಕ್ಕೆ ಮಾರಕ

1Huk2
Published on

ಹುಕ್ಕೇರಿ: ಯುವ ಜನಾಂಗಕ್ಕೆ ಹಿರಿಯರು ಸೇವಿಸುತ್ತಿದ್ದ ಪೌಷ್ಟಿಕ ಆಹಾರ ಪದ್ಧತಿ ತಿಳಿಸಿಕೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾದೀಶ ರಾಜಣ್ಣ ಸಂಕನ್ನವರ ಹೇಳಿದರು.

ಸ್ಥಳೀಯ ಅಡವಿಸಿದ್ಧೇಶ್ವರ ಮಠದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪೌಷ್ಟಿಕ ಆಹಾರ ದಿನ ಉದ್ಘಾಟಿಸಿ ಮಾತನಾಡಿ, ಜಂಕ್‌ಫುಡ್ ಸೇವನೆ ಕಡಿಮೆ ಮಾಡಿ, ತರಕಾರಿ, ಹಣ್ಣು, ತರಕಾರಿ, ಹಾಲು ಸೇವನೆಯಿಂದ ಉತ್ತಮ ಆರೋಗ್ಯದ ಜತೆಗೆ ದೀರ್ಘಾಯುಷಿಯಾಗಲು ಸಾಧ್ಯ ಎಂದರು.

ಸಿವಿಲ್ ನ್ಯಾಯಾದೀಶ ಆದಿತ್ಯ ಕಲಾಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸಾಯನಿಕ ಬಳಸಿದ ಆಹಾರ ಮಾರಾಟ ಹೆಚ್ಚಾಗಿದೆ. ಸಾವಯವ ಆಹಾರ ಸೇವನೆ ಮಾಡಬೇಕು ಎಂದರು.

ವಕೀಲ ಭೀಮಸೇನ ಬಾಗಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಮಲಾ ಹಿರೇಮಠ ಉಪನ್ಯಾಸ ನೀಡಿದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೊಳೆಪ್ಪ ಎಚ್., ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನದಾಫ್, ಉಮೇಶ ದಡ್ಡಿಮನಿ, ಅನಿತಾ ಕುಲಕರ್ಣಿ, ಆಶಾ ಸಿಂಗಾಡಿ, ಏಗನ್ನವರ, ಪ್ರಕಾಶ ಕಲ್ಲೋಳಿ, ಸಿಪಿಐ ಮಹಾಂತೇಶ ಬಸಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net