ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ಸೇವನೆ ಉತ್ತಮ

25skpp2-1 jss food
Published on


ಸಕಲೇಶಪುರ : ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಸೇವಿಸುವ ಆಹಾರದ ಕುರಿತು ಪ್ರತಿಯೋಬ್ಬರು ಜಾಗೃತಿ ಹೊಂದಬೇಕು ಎಂದು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಂಯೋಜಕ ಮಂಜುನಾಥ್ ಹೇಳಿದರು.


ತಾಲೂಕಿನ ಬಾಗೆ ಗ್ರಾಮದಲ್ಲಿರುವ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಉತ್ತಮ ಆಹಾರ ಸೇವನೆಯಿಂದ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಇಂದಿನ ದಿನಗಳಲ್ಲಿ ಮಕ್ಕಳು ಜಂಕ್‌ಪುಡ್ ಆಹಾರಗಳನ್ನು ಹೆಚ್ಚು ಸೇವಿಸುತ್ತಿರುವುದು ಆತಂಕಕಾರಿಯಾಗಿದೆ. ನ್ಯೂಡಲ್ಸ್, ಪಿಜ್ಜಾದಂತಹ ಆಹಾರಗಳನ್ನು ಅಪರೂಪಕ್ಕೆ ತಿಂದರೆ ತೊಂದರೆಯಿಲ್ಲ. ಆದರೆ ಇಂತಹ ಜಂಕ್‌ಪುಡ್ ಅನ್ನು ನಿಯಮಿತವಾಗಿ ತಿಂದರೆ ವಿವಿಧ ತೊಂದರೆಗಳಿಗೆ ತುತ್ತಾಗಬೇಕಾಗುತ್ತದೆ ಎಂದರು.


ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಆರೋಗ್ಯ ಸ್ನೇಹಿ ಖಾದ್ಯವನ್ನು ಹೆಚ್ಚು ನೀಡಬೇಕು. ಮನೆಯಲ್ಲೆ ಬೆಳೆದ ತರಕಾರಿ, ಹಣ್ಣನ್ನು ಹೆಚ್ಚು ಸೇವಿಸಲು ಮಕ್ಕಳು ಹಾಗೂ ಪಾಲಕರು ಮುಂದಾಗಬೇಕು. ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಸಹ ಸೇವಿಸಲು ಪ್ರತಿಯೋರ್ವರು ಮುಂದಾಗಬೇಕು ಎಂದು ಕಿತಿಮಾತು ಹೇಳಿದರು.


ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ವಿವಿಧ ರೀತಿಯ ಆಹಾರಗಳನ್ನು ಮಾಡಿ ಮಾರಾಟ ಮಾಡಿದ್ದು, ಕಂಡು ಬಂದಿತು. ಪಾಲಕರು ಆಹಾರ ಪದಾರ್ಥಗಳನ್ನು ಖರೀದಿ ಮಾಡಲು ಎಲ್ಲ ಮಳಿಗೆಗಳಿಗೆ ಹೋಗಿ ವೀಕ್ಷಣೆ ಮಾಡಿದರು. ಬಾಗೆ ಜೆಎಸ್‌ಎಸ್ ಶಾಲೆಯ ಪ್ರಾಂಶುಪಾಲ ಮಧುಕುಮಾರ್, ಚಿತ್ರಕಲಾ ಶಿಕ್ಷಕ ಶ್ರೆಧರ್ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net