ತರಕಾರಿ, ಮೊಳಕೆ ಕಾಳು ಸೇವಿಸಿ

03 ALVANDI 03
ಬಿಸರಳ್ಳಿಯಲ್ಲಿ ಪೋಷಣ ಅಭಿಯಾನ ನಡೆಯಿತು. ಆರೋಗ್ಯ ಶಿಕ್ಷಣಾಧಿಕಾರಿ ರವಿಕುಮಾರ ಬೆಟಗೇರಿ, ರೇಖಾ ಬಡಿಗೇರ, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ರೇಣುಕಾ ಹೊಂಬಾಳ, ಅಂಗನವಾಡಿ ಕಾರ್ಯಕರ್ತೆರಾದ ಶೀಲಾ, ಸರಸ್ವತಿ, ಎಲ್ಲಮ್ಮ, ಗ್ರಾಪಂ ಸದಸ್ಯೆ ಅನ್ನಪೂರ್ಣಾ ಕಮ್ಮಾರ, ಆಶಾಗಳಾದ ಮಂಜುಳಾ, ಹೇಮಾವತಿ, ವಿಶಾಲಾಕ್ಷಿ, ಶಾರದಾ, ಸ್ಫೂರ್ತಿ ಯೋಜನೆಯ ಕಲ್ಪನಾ ಹಿರೇಮಠ ಇತರರಿದ್ದರು.
Published on

ಅಳವಂಡಿ: ಆರೋಗ್ಯ ಸದೃಢವಾಗಿರಲು ಪೌಷ್ಟಿಕ ಆಹಾರ ಸೇವನೆ ಬಹು ಮುಖ್ಯ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಹೇಳಿದರು.

ಸಮೀಪದ ಬಿಸರಳ್ಳಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪೋಷಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಗರ್ಭಿಣಿಯರು, ತಾಯಂದಿರು ಕರಿದ ಪದಾರ್ಥಗಳನ್ನು ಸೇವಿಸದೆ ತರಕಾರಿ, ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸುವುದರಿಂದ ಸದೃಢ ಆರೋಗ್ಯ ಹೊಂದಲು ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net