ಪೌಷ್ಟಿಕ ಆಹಾರ ಸೇವನೆ ಮಾಡಿ

Eat nutritious food
ವಿಜಯಪುರದ ಶಂಕರಲಿಂಗ ಗಜಾನನ ತರುಣ ಮಂಡಳಿ ವತಿಯಿಂದ ನಡೆದ ಆರೋಗ್ಯ ಉಚಿತ ಶಿಬಿರದಲ್ಲಿ ವೈದ್ಯ ಡಾ. ರೇವಣೇಶ ಮಿರ್ಜಿ ತಪಾಸಣೆ ನಡೆಸಿದರು.
Published on

ವಿಜಯಪುರ: ನಗರದ ಜೋರಾಪುರ ಪೇಟೆಯ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಶ್ರೀ ಶಂಕರಲಿಂಗ ಗಜಾನನ ಮಂಡಳಿ ವತಿಯಿಂದ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸೋಮವಾರ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು.

ಡಾ. ರೇವಣೇಶ ಮಿರ್ಜಿ ಮಾತನಾಡಿ, ಪ್ರಸ್ತುತ ದಿನದಲ್ಲಿ ಹಲವು ಜನರಿಗೆ ಸಂಧಿವಾತದ ಸಮಸ್ಯೆಗಳು ಸಾಮಾನ್ಯವಾಗಿವೆ.

ಸಂಧಿವಾತ ಕಾಯಿಲೆ ಅನುವಂಶಿಕವಾಗಿ ಹಾಗೂ ಧೂಮಪಾನ, ವಾಯು ಮಾಲಿನ್ಯದಿಂದಲೂ ಬರುತ್ತದೆ. ನಿತ್ಯ ವಾಕಿಂಗ್​, ಯೋಗಾಸನ, ಪೌಷ್ಟಿಕ ಆಹಾರ ಸೇವನೆಯಿಂದ ಈ ಕಾಯಿಲೆಯನ್ನು ದೂರವಿಡಬಹುದು. ಅಗತ್ಯ ಬಿದ್ದರೆ ಸೂಕ್ತ ಸಮಯದಲ್ಲಿ ತ ವೈದ್ಯರನ್ನು ಕಾಣಬೇಕು ಎಂದರು.

ಬಣಗಾರ ಸಮಾಜ ಸೇವಾ ಸಂದ ಅಧ್ಯ ಮಹೇಶ ಹೇರಲಗಿ ಮಾತನಾಡಿ, ಪ್ರತಿ ವರ್ಷ ಆರೋಗ್ಯ ಉಚಿತ ತಪಾಸಣೆಯಿಂದ ಹಲವು ಬಡ ಜನರಿಗೆ ಅನುಕೂಲವಾಗಿದೆ ಎಂದರು.

ಶಿಬಿರದಲ್ಲಿ ಸಂಧಿವಾತ, ಅರ್ಥರೈಟಿಸ್​ ಸಮಸ್ಯೆಗಳಿಗೆ ಸಂಬಂಧಿಸಿದ ನೂರಕ್ಕೂ ಅಧಿಕ ಜನರ ತಪಾಸಣೆ ನಡೆಸಿ ಉಚಿತ ಔಷಧ ವಿತರಿಸಲಾಯಿತು. ದಾನಪ್ಪ ಕುರ್ಲೆ ನಿರೂಪಿಸಿದರು. ಮಹೇಶ ಕುರ್ಲೆ ವಂದಿಸಿದರು.

ಸಮಾಜದ ಪವಾಡಪ್ಪ ಗಿಡವೀರ, ಗಜಾನನ ಮಂಡಳಿಯ ಅಧ್ಯ ಆಶಿಶ ಹುಣಶ್ಯಾಳ, ಉದ್ಯಮಿ ಅಪ್ಪು ಹೇರಲಗಿ, ರಮಾಕಾಂತ ಲೋಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net