

ವಿಜಯವಾಣಿ ಸುದ್ದಿಜಾಲ ವಿಜಯಪುರ
ಯುವಜನತೆ ದುಶ್ಚಟಗಳಿಂದ ದೂರವಿದ್ದು, ಹೆಚ್ಚಾಗಿ ಸಮತೋಲನ ಮತ್ತು ನೈಸರ್ಗಿಕ ಆಹಾರ ಸೇವಿಸಬೇಕು. ದೈಹಿಕ ಸದೃಢತೆ ಕಾಯ್ದುಕೊಳ್ಳಲು ನಿತ್ಯ ವ್ಯಾಯಾಮ ಮಾಡುವುದು ಅತ್ಯವಶ್ಯಕ ಎಂದು ಡಾ. ಪೂಜಾ ತೊದಲಬಾಗಿ ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಶಿಣ ಮಹಾವಿದ್ಯಾಲಯದಲ್ಲಿ ಬಿಎಲ್ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಹಾಗೂ ಎಂ.ಬಿ. ಪಾಟೀಲ ಫೌಂಡೇಷನ್ ಸಹಯೋಗದೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಜನತೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ ಕೂಡಲೇ ಮನೋವೈದ್ಯರನ್ನು ಸಂಪರ್ಕಿಸುವ ಮೂಲಕ ಮಾನಸಿಕವಾಗಿ ಸದೃಢತೆ ಹೊಂದಬೇಕು. ಅಲ್ಲದೆ, ನಿರಂತರವಾಗಿ ಆರೋಗ್ಯ ಪರೀೆ ಮಾಡಿಕೊಳ್ಳಬೇಕು. ಅದರಿಂದ ಯುವಜನತೆಯಲ್ಲಿ ಸಂಭವಿಸಬಹುದಾದ ಹೃದಯಘಾತ ತಡೆಯಬಹುದಾಗಿದೆ ಎಂದು ಸಲಹೆ ನೀಡಿದರು.
ಸಂಸ್ಥೆಯ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಸೂರ್ಯಕಾಂತ ಬಿರಾದಾರ ಮಾತನಾಡಿದರು. ಪ್ರಾಚಾಯೆರ್ ಡಾ. ಭಾರತಿ ಖಾಸನಿಸ ಅಧ್ಯಕ್ಷತೆ ವಹಿಸಿದ್ದರು.
ಪ್ರಾಧ್ಯಾಪಕರಾದ ಎಂ.ಎಸ್. ಹಿರೇಮಠ, ಜೆ.ಎಸ್. ಪಟ್ಟಣಶೆಟ್ಟಿ, ಡಾ. ಬಿ.ಎಸ್. ಹಿರೇಮಠ, ಎಸ್.ಎಸ್. ಪಾಟೀಲ, ಪಿ.ಡಿ. ಮುಲ್ತಾನಿ ಮತ್ತಿತರರಿದ್ದರು.
ಪ್ರಶಿಣಾರ್ಥಿ ಪುಷ್ಪಾ ಮುರನಾಳ ನಿರೂಪಿಸಿದರು. ಸಹ ಪ್ರಾಧ್ಯಾಪಕ ಎಂ.ಬಿ. ಕೋರಿ ವಂದಿಸಿದರು.
ವಿಜಯಪುರದ ಬಿಎಲ್ಡಿಇ ಸಂಸ್ಥೆಯ ಜೆಎಸ್ಎಸ್ ಶಿಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಡಾ. ಪೂಜಾ ತೊದಲಬಾಗಿ ಮಾತನಾಡಿದರು. ಸೂರ್ಯಕಾಂತ ಬಿರಾದಾರ, ಡಾ. ಭಾರತಿ ಖಾಸನಿಸ ಇದ್ದಾರೆ.