ಶುಚಿತ್ವ ಇದ್ದಲ್ಲಿ ತಿಂಡಿ ತಿನಿಸು ಸೇವಿಸಿ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಲಹೆ

Published on

ಮೈಸೂರು: ನೀರಿನ ಶುದ್ಧೀಕರಣದ ಬಗ್ಗೆ ಗಮನಹರಿಸುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಬೋರ್‌ವೆಲ್‌ಗೆ ಚರಂಡಿ ನೀರು ಸೇರಿದ್ದರಿಂದ ಕೆ.ಸಾಲುಂಡಿಯಲ್ಲಿ ಜನರಿಗೆ ತೊಂದರೆ ಅಗಿದೆ. ಜಿಲ್ಲೆಯಲ್ಲಿ ವಾಡಿಕೆಯಂತೆ 4 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ 40 ಮಿ.ಮೀ ಮಳೆ ಸುರಿದ ಕಾರಣ ಮಳೆ ನೀರು ಹೆಚ್ಚಾಗಿ ಚರಂಡಿ ನೀರು ಬೋರ್‌ವೆಲ್‌ಗೆ ಸೇರಿ ಘಟನೆ ಸಂಭವಿಸಿದೆ ಎಂದು ಶುಕ್ರವಾರ ಮಾವುಮೇಳ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲ ಆಯುಕ್ತರು, ಪಿಡಿಒಗಳಿಗೆ ನೀರಿನ ಶುದ್ಧೀಕರಣದ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಗ್ರಾಮದಲ್ಲಿ 120 ಜನರ ಸ್ಯಾಂಪಲ್ ಪಡೆದು ಪರೀಕ್ಷಿಸಲಾಗಿದೆ ಎಂದರು.
ನಿರಂತರವಾಗಿ ಭೇದಿಯಾಗಿ ನಿರ್ಜಲೀಕರಣವಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡದುಕೊಳ್ಳಬೇಕು. ಖಾಸಗಿ ಆಸ್ಪತ್ರೆಯಲ್ಲಿ ಸಾಧ್ಯವಾಗದಿದ್ದರೆ ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಇಂತಹ ಪ್ರಕರಣ ಕಂಡು ಬಂದಂತೆ ತಕ್ಷಣ ಜಿಲ್ಲಾಡಳಿತ ಇಲ್ಲವೇ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಮನೆಗಳಲ್ಲಿ ಕಾಯಿಸಿದ ನೀರನ್ನು ಸೇವಿಸಿ. ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ಕಾಪಾಡುವವರ ಬಳಿ ತಿಂಡಿ ತಿನಿಸು ಸೇವಿಸಿ ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net