

ನರಗುಂದ: ಪ್ರಕೃತಿ ಅನುಸಾರವಾಗಿ ನಿಯಮಿತ ಆಹಾರ ಸೇವನೆ, ಜೀವನಶೈಲಿ ರೂಢಿಸಿಕೊಂಡರೆ ಪ್ರತಿಯೊಬ್ಬರೂ ಆರೋಗ್ಯಕರವಾಗಿರಬಹುದು ಎಂದು ಎಸ್ವೈಎಸ್ ಡಿ.ಇಡಿ ಕಾಲೇಜ್ ಪ್ರಾಚಾರ್ಯ ಆರ್.ಬಿ. ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಕಾಲೇಜ್ನಲ್ಲಿ ಎನ್ನೆಸ್ಸೆಸ್ ಘಟಕ, ಹುಬ್ಬಳ್ಳಿಯ ಸಂಜೀವಿನಿ ಆಯುರ್ವೆದಿಕ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗಳ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದೇಶ ಕೀ ಪ್ರಕೃತಿ ಪರೀಕ್ಷೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಕೃತಿ ವಿಶ್ಲೇಷಣೆಯಲ್ಲಿ ನಮ್ಮ ಕೈಯಲ್ಲಿರುವ ತೋರು ಬೆರಳು ವಾತಕ್ಕೆ, ಮಧ್ಯದ ಬೆರಳು ಪಿತ್ತ, ಉಂಗುರದ ಬೆರಳು ಕಫಕ್ಕೆ ಅನುರೂಪವಾಗಿದೆ. ಯಾವ ಬೆರಳಿನ ನಾಡಿಗಳು ಪ್ರಬಲವಾಗಿದೆಯೋ ಆ ಮೂಲಕ ಮಾನವನ ದೇಹದಲ್ಲಿರುವ ವಿವಿಧ ರೋಗದ ಲಕ್ಷಣಗಳನ್ನು ಗುರುತಿಸಬಹುದಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗಳಿಗೆ ಪ್ರಕೃತಿ ಪರೀಕ್ಷೆ ಮಾಡಿಸುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹುದೊಡ್ಡ ಕನಸಾಗಿದೆ. ಆಸಕ್ತ ಸಾರ್ವಜನಿಕರು ಹತ್ತಿರದ ಆಯುಷ್ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳನ್ನು ಸಂರ್ಪಸಿದರೆ ವೈದ್ಯಾಧಿಕಾರಿಗಳು ಹಾಗೂ ಅಲ್ಲಿನ ಸಿಬ್ಬಂದಿ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳುವಲ್ಲಿ ಹಾಗೂ ನಿಮ್ಮ ಪ್ರಕೃತಿ ನಿರ್ಧರಿಸುವಲ್ಲಿ ಸಹಕರಿಸುತ್ತಾರೆ ಎಂದು ತಿಳಿಸಿದರು.
ಹುಬ್ಬಳ್ಳಿ ಆಯುರ್ವೆದಿಕ್ ಮೆಡಿಕಲ್ ಕಾಲೇಜಿನ ಜನರಲ್ ಸೆಕ್ರೆಟರಿ ಆಕಾಶ ಹಿರೇಮಠ ಮಾತನಾಡಿ, ರಾಷ್ಟ್ರವ್ಯಾಪಿ ಆರೋಗ್ಯ ಜಾಗೃತಿ ಉಪ ಕ್ರಮವಾಗಿರುವ ಪ್ರಕೃತಿ ಪರೀಕ್ಷೆ ಅಭಿಯಾನವನ್ನು 4,70,000ಕ್ಕೂ ಅಧಿಕ ಸಮರ್ಪಿತ ಸ್ವಯಂ ಸೇವಕರಿಂದ ಮುನ್ನಡೆಸಲ್ಪಡುವುದರ ಜತೆಗೆ ಭಾರತದಾದ್ಯ್ಯತ ಆರೋಗ್ಯ ಜಾಗೃತಿಯನ್ನು ಕ್ರಾಂತಿಗೊಳಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಂದ ಪ್ರಕೃತಿ ಅಭಿಯಾನದ ನೋಂದಣಿ ಮಾಡಿಸಲಾಯಿತು. ಪ್ರಜ್ವಲ್ ಜಿ, ಪೂಜಾ ಮಾಲಿ ಪಾಟೀಲ, ದೀಕ್ಷಿತ್ ಎಂ.ಎಸ್, ಎಸ್ವೈಎಸ್ ಬಿ.ಇಡಿ ಕಾಲೇಜಿನ ದೈಹಿಕ ನಿರ್ದೇಶಕ ಎನ್.ಎಂ. ವಾಗ್ಮೋಡೆ, ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಗತಿ ಬಡಿಗೇರ, ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಎಂ.ಈ.ವಿಶ್ವಕರ್ಮ, ಉಪನ್ಯಾಸಕ ಎಂ.ಪಿ. ಕ್ಯಾತನಗೌಡ್ರ ನಿರ್ವಹಿಸಿದರು.