ಉತ್ತಮ ಆರೋಗ್ಯಕ್ಕಾಗಿ ಹಿತ-ಮಿತ ಆಹಾರ ಸೇವಿಸಿ

gld 8-2 shibir
ಪರ್ವತಿ ಗ್ರಾಮದಲ್ಲಿ ಎಬಿವಿಪಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಡಾ. ಬಸವರಾಜ ಬಂಟನೂರ, ಬಿವಿಪಿ ನಗರ ಘಟಕದ ಅಧ್ಯಕ್ಷ ರವಿ ಉಪ್ಪಾರ, ಜಿಲ್ಲಾ ಸಂಚಾಲಕ ಪ್ರಥಮೇಶ ವಾಘಮೋಡೆ, ಅಮಿತ ವಾಳದ, ಗೌರೀಶ ಖೋತ್, ವಿಶ್ವನಾಥ ಕಳ್ಳಿಗುಡ್ಡ ಇತರರಿದ್ದರು.
Published on

ಗುಳೇದಗುಡ್ಡ: ಉತ್ತಮ ಆರೋಗ್ಯಕ್ಕಾಗಿ ಹಿತ-ಮಿತ ಆಹಾರ ಸೇವಿಸಬೇಕು ಎಂದು ಶ್ರೀ ಬನಶಂಕರಿ ಆಸ್ಪತ್ರೆ ವೈದ್ಯ ಡಾ. ಬಸವರಾಜ ಬಂಟನೂರ ಹೇಳಿದರು.

ಸಮೀಪದ ಪರ್ವತಿ ಗ್ರಾಮದ ಹನುಮಂತ ದೇವರ ದೇವಸ್ಥಾನ ಆವರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರಗಳು ಹೆಚ್ಚು ಆಯೋಜಿಸಬೇಕು ಎಂದರು.

ಬಿವಿಪಿ ನಗರ ಘಟಕದ ಅಧ್ಯಕ್ಷ ರವಿ ಉಪ್ಪಾರ, ಜಿಲ್ಲಾ ಸಂಚಾಲಕ ಪ್ರಥಮೇಶ ವಾಘಮೋಡೆ, ಅಮಿತ ವಾಳದ, ಗೌರೀಶ ಖೋತ್, ವಿಶ್ವನಾಥ ಕಳ್ಳಿಗುಡ್ಡ, ಮೈತ್ರಿ ರಾಜನಾಳ, ಶಶಾಂಕ ಸಿಂದಗಿ, ಆಕಾಶ ತಿಪ್ಪಾ, ನಿಖಿಲ ಶಹಾಪೂರ, ಸುದರ್ಶನ ದೇವಾಂಗಮಠ, ಲಕ್ಷ್ಮಣ ಭಜಂತ್ರಿ, ಐಶ್ವರ್ಯ ಭಾವಿಕಟ್ಟಿ, ಪವನ ಉಂಕಿ, ಶಂಕ್ರಮ್ಮ ಮುರಗೋಡ, ನಾಗರತ್ನಾ ರಂಜಣಗಿ, ನಿಖಿಲ ತಟ್ಟಿಮಠ, ಸಂಜನಾ ಚಂದನ್ನವರ ಪಾಲ್ಗೊಂಡಿದ್ದರು. 80ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net