ಕ್ಯಾನ್ಸರ್​ ಕಡಿವಾಣಕ್ಕೆ ಸುಲಭ ಸೂತ್ರಗಳು ಬಿಡುಗಡೆ ನಾಳೆ

62df2858-7683-4757-84d8-5c5cf2be155f
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಿ.ಟಿ. ನಾಯಕ ಅನುವಾದಿತ ಕ್ಯಾನ್ಸರ್​ ಕಡಿವಾಣಕ್ಕೆ ಸುಲಭ ಸೂತ್ರಗಳು ಕೃತಿಯನ್ನು ಜೂ. 9ರಂದು ಸಂಜೆ 5 ಗಂಟೆಗೆ ಕಲ್ಯಾಣನಗರದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಿವೃತ್ತ ಪ್ರಾಧ್ಯಾಪಕ ಆರ್​.ಎಂ. ಷಡಕ್ಷರಯ್ಯ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ. ಶ್ರೀನಿವಾಸ ಬನ್ನಿಗೋಳ, ಡಾ. ಕುಮಾರಸ್ವಾಮಿ ಹಿರೇಮಠ ಆಗಮಿಸಲಿದ್ದಾರೆ. ಆಂಗ್ಲ ಭಾಷೆ ಕೃತಿ ಲೇಖಕ ಎಚ್​.ಎಸ್​. ಕುಲಕಣಿರ್, ಬಿ.ಟಿ. ನಾಯಕ ಉಪಸ್ಥಿತರಿರುವರು ಎಂದರು.
ಎಚ್​.ಎಸ್​. ಕುಲಕಣಿರ್ ಕ್ಯಾನ್ಸರ್​ ಪೀಡಿತರಾಗಿ ಸಾಕಷ್ಟು ನೋವುಗಳನ್ನು ಕಂಡಿದ್ದಾರೆ. ಆಗ ಹತ್ತಾರು ಗಿಡ ಮೂಲಿಕೆಗಳನ್ನು ಪರಿಚಯ ಮಾಡಿಕೊಂಡು ಅವುಗಳ ಸೇವನೆ ಪ್ರಮಾಣ ಅರಿತರು. ನಂತರ ಆಯುರ್ವೇದ ಔಷಧಗಳ ಬಳಕೆಯಿಂದ ಕ್ಯಾನ್ಸರ್​ ಮುಕ್ತರಾದರು. ಈ ಅನುಭವದಿಂದಲೇ "ದಿ ಮಂತ್ರ ಾರ್​ ವಿನ್ನಿಂಗ್​ ಕ್ಯಾನ್ಸರ್​ ಬ್ಯಾಟಲ್​' ಕೃತಿ ರಚಿಸಿದರು. ಆದರೆ ಸಾಮಾನ್ಯ ಜನರಿಗೂ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಎಚ್​.ಎಸ್​. ಕುಲಕಣಿರ್ ಮಾತನಾಡಿ, ಕ್ಯಾನ್ಸರ್​ ತಡೆಗೆ ಧೈರ್ಯವೇ ಮೊದಲ ಮದ್ದು. ಕ್ಯಾನ್ಸರ್​ ಪತ್ತೆಯಾಗಿದೆ ಎಂದಾಕ್ಷಣ ಕುಗ್ಗದೆ ಧೈರ್ಯದಿಂದ ಮದ್ದು ಪಡೆಯಬೇಕು. ವೈದ್ಯರ ಸಲಹೆ ಮೇರೆಗೆ ಔಷಧಿ ಪಡೆಯುವುದರ ಜತೆಗೆ, ಆಯುರ್ವೇದ ಔಷಧಿ ಸಹ ಪಡೆದರೆ ಕ್ಯಾನ್ಸರ್​ ಮುಕ್ತರಾಗಬಹುದು. ನಾನು ಕ್ಯಾನ್ಸರ್​ ಮುಕ್ತನಾಗಿ 12 ವರ್ಷವಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲದೆ ಓಡಾಡುತ್ತಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಬಿ.ಟಿ. ನಾಯಕ, ಶ್ರೀನಿವಾಸ ದೇಸಾಯಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net