

ಸಾಸ್ವೆಹಳ್ಳಿ:ಹೋಬಳಿಯ ರಾಂಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಪೂರ್ವವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಆ.23ರಂದು ಹೊನ್ನಾಳಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಶಾಲೆಯ ಸಂದೀಪ್ ಎಂ.ಎಸ್. 1500 ಮೀಟರ್ ಓಟದಲ್ಲಿ ಪ್ರಥಮ, ಆಂಜನೇಯ ಗುಂಡು ಎಸೆತದಲ್ಲಿ ಪ್ರಥಮ, ಅಭಿಷೇಕ್ ಎಚ್. 400 ಮೀಟರ್ ಓಟ, ತ್ರಿವಿಧ ಜಿಗಿತದಲ್ಲಿ ಪ್ರಥಮ, ಆಂಜನೇಯ ಬಿ.ಎಚ್. ಭರ್ಜಿಎಸೆತದಲ್ಲಿ ತೃತಿಯ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ತಾರಾ 100 ಮೀಟರ್ ಓಟದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ದ್ವಿತೀಯ, ಅಂಜಲಿ ಭರ್ಜಿಎಸೆತದಲ್ಲಿ ಪ್ರಥಮ, ಪ್ರಾರ್ಥನಾ ಜಿ.ಪಿ. ದ್ವಿತೀಯ, ನರಸಮ್ಮ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕ ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್ ಪ್ರಥಮ, ಬಾಲಕ ವಿಭಾಗದ 4100 ಮೀಟರ್ ರಿಲೇ ದ್ವಿತೀಯ, ಬಾಲಕಿಯರ ವಿಭಾಗದ 4100 ಮೀಟರ್ ರಿಲೇ ಪ್ರಥಮ ಸ್ಥಾನ ಪಡೆದಿದ್ದಾರೆಂದು ಮುಖ್ಯಶಿಕ್ಷಕ ಪಿ.ಜಿ. ರಾಜು ತಿಳಿಸಿದರು.
ಪೂರ್ವವಲಯ ಮಟ್ಟದ ಕ್ರೀಡಾಕೂಟದ ಸಮಗ್ರ ಪ್ರಶಸ್ತಿ ಸಹ ತಮ್ಮ ಪ್ರೌಢಶಾಲೆ ಪಡೆದಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಕಮಿಟಿ ಅಧ್ಯಕ್ಷ ಸುರೇಶ್ ಸಿ.ಎಸ್. ವಹಿಸಿದ್ದರು. ಸದಸ್ಯರಾದ ಎಸ್. ತಿಮ್ಮಯ್ಯ, ಪ್ರಕಾಶ್, ಶಿಕ್ಷಕರಾದ ಚಂದ್ರಶೇಖರ್ ಎಚ್.ಸಿ., ನಾಗರಾಜ್‌ಎಂ.ಎಲ್., ಪ್ರಕಾಶ್‌ಕುಮಾರ್ ಸಿ.ಎಲ್., ನವೀನ್ ಜಿ.ಪಿ., ಪ್ರಕಾಶ್ ಮಳವಳ್ಳಿ, ಅನಿಲ್‌ಕುಮಾರ್ ಬಿ.ಎಂ., ದೈಹಿಕ ಶಿಕ್ಷಕಿ ಸುನೀತಾ ಬಾರ್ಕಿ, ಸಿಬ್ಬಂದಿ ಲಕ್ಷ್ಮೀಬಾಯಿ ಇದ್ದರು.