

ವಿಜಯಪುರ: ಕಳೆದ ಹಲವು ತಿಂಗಳುಗಳಿಂದ ತಣ್ಣಗಾಗಿದ್ದ ಭೂ ಕಂಪನದ ಹಾವಳಿ ಮತ್ತೆ ಜೋರಾಗಿದೆ !
ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಬೆಳಗ್ಗೆ 11.30ಕ್ಕೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲಾಗಿದೆ. ಭೂಮಿ ಕಂಪಿಸಿದ ಅನುಭವದಿಂದ ಜನ ಆತಂಕಗೊಂಡಿದ್ದಾರೆ. ಸುತ್ತಲಿನ ಗ್ರಾಮಗಳಲ್ಲಿ ಭೂಕಂಪನದ ಕುರಿತೇ ಚರ್ಚೆಯಾಗಿದ್ದು, ಮರುಕಳಿಸುವ ಆತಂಕದಲ್ಲಿದ್ದಾರೆ.
ಇದೊಂದು ಸಣ್ಣ ಪ್ರಮಾಣದ ಕಂಪನವಾಗಿದ್ದು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಹೊನವಾಡ ಹೊರತು ಪಡಿಸಿ ಬೇರೆಲ್ಲೂ ಭೂಮಿ ಕಂಪಿಸಿದ ಅನುಭವವಾಗಿಲ್ಲ. ಸಾರ್ವಜನಿಕರು ಆತಂಕ ಪಡುವಂಥದ್ದೇನಿಲ್ಲವೆಂದು ವಿಪತ್ತು ನಿರ್ವಹಣೆ ಅಧಿಕಾರಿ ರಾಕೇಶ ಜೈನಾಪುರ ಪ್ರತಿಕ್ರಿಯಿಸಿದರು.