ಆಳಂದ ತಾಲೂಕಿನಲ್ಲಿ ಕಂಪಿಸಿದ ಭೂಮಿ : ಭಯದಿಂದ ಮನೆಗಳಿಂದ ಹೊರಬಂದ ಜನರು

1109 KLB CHINCHANSUR
Published on
ರಿಕ್ಟರ್ ಮಾಪಕದಲ್ಲಿ ೨.೩ ತೀವ್ರತೆ ದಾಖಲಾಗಿದೆ
ಆಳಂದ (ಕಲಬುರಗಿ): ನರೋಣಾ ಕಂದಾಯ ವ್ಯಾಪ್ತಿಯ ಚಿಂಚನಸೂರ, ಜವಳಗಾ, ಆಲೂರ ಗ್ರಾಮಗಳಲ್ಲಿ ಗುರುವಾರ ೨.೩ ತೀವ್ರತೆಯ ಭೂಕಂಪನವಾಗಿದ್ದು, ಭಯದಿಂದ ಜನರು ಮನೆಗಳಿಂದ ಹೊರಬಂದಿದ್ದಾರೆ. ಬೆಳಗ್ಗೆ ೮.೧೭ಕ್ಕೆ ಭಾರಿ ಶಬ್ದದೊಂದಿಗೆ ಸುಮಾರು ಐದು ನಿಮಿಷ ಭೂಮಿ ಕಂಪಿಸಿದ ಅನುಭವವಾಗಿದೆ. ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಶಬ್ದ ಕೇಳಿಸುತ್ತಿದ್ದಂತೆ ಜನರು ಮನೆ ಬಿಟ್ಟು ರಸೆಗೆ ಬಂದರು. ಕೆಲ ಸಮಯದ ಬಳಿಕ ಮನೆಯೊಳಗೆ ಹೋಗಿ ಸಾಮಗ್ರಿಗಳನ್ನು ಜೋಡಿಸಿಟ್ಟರು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಭೂಕಂಪನವನ್ನು ದೃಢಪಡಿಸಿದೆ. ಗಣಿ ಮತ್ತು ಭೂ ವಿe್ಞÁನ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಇಂಥ ಭೂಕಂಪನ ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ. ತೀವ್ರತೆ ಕಡಿಮೆಯಾಗಿದ್ದು, ಸಮಸ್ಯೆಯಾಗಲ್ಲ ಎಂದು ಹೇಳಿದರು. ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾಬಾಯಿ ರಾಮನ್, ಉಪಾಧ್ಯP್ಷÀ ಪ್ರಶಾಂತ ಇಂಡಿ, ಸ್ಥಳೀಯರಾದ ಕಾಶೀನಾಥ ರಾಮನ್, ಶ್ರೀಶೈಲ ಪಾಟೀಲ್, ಅವಿನಾಶ, ಸುನೀಲಕುಮಾರ ಇತರರಿದ್ದರು.
ಗ್ರಾಮಸ್ಥರು ಆತಂಕಪಡಬೇಕಿಲ್ಲ
ಕಲಬುರಗಿ ಜಿ¯್ಲೆ ಆಳಂದ ತಾಲೂಕಿನ ಚಿಂಚನಸೂರ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ೮.೧೭ಕ್ಕೆ ಸಣ್ಣ ಪ್ರಮಾಣದ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ೨.೩ ತೀವ್ರತೆ ದಾಖಲಾಗಿದೆ. ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದೊAದಿಗೆ ನಿರಂತರ ಸಂಪರ್ಕದಲ್ಲಿದ್ದು, ಸ್ಥಳಕ್ಕೆ ಗಣಿ ಮತ್ತು ಭೂ ವಿe್ಞÁನ ಇಲಾಖೆ, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಭೂಕಂಪನ ಸಣ್ಣ ಪ್ರಮಾಣz್ದÁಗಿದ್ದು, ಗ್ರಾಮಸ್ಥರು ಆತಂಕಪಡಬೇಕಿಲ್ಲ.
| ಪ್ರಿಯಾಂಕ್ ಖರ್ಗೆ
ಜಿಲ್ಲಾ ಉಸ್ತುವಾರಿ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net