ಗ್ರಾಮೀಣ ಪ್ರದೇಶಗಳ ಸ್ವಚ್ಛತೆಗೆ ಆದ್ಯತೆ

myk 01
Published on

ಮಾಯಕೊಂಡ: ಭಾರತ ಹಳ್ಳಿಗಳ ದೇಶ, ಹಳ್ಳಿಗಳು ಉದ್ಧಾರವಾಗದೆ ದೇಶದ ಪ್ರಗತಿ ಅಸಾಧ್ಯ ಎನ್ನುವ ಗಾಂಧೀಜಿಯವರ ಆಶಯದಂತೆ ಮೊದಲು ಗ್ರಾಮೀಣ ಪ್ರದೇಶಗಳ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಸಲಹೆ ನೀಡಿದರು.

ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಪಂ ವ್ಯಾಪ್ತಿಯ ಹಿರೇ ತೊಗಲೇರಿ ಗ್ರಾಮದಲ್ಲಿ ಸೋಮವಾರ ತಾಲೂಕು ಮಟ್ಟದ ಕಸ ವಿಲೇವಾರಿ ಘಟಕದ ಕಟ್ಟಡ ನಿರ್ವಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನಗರಸಭೆ, ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ವಿುಕರಂತೆ ಗ್ರಾಮೀಣ ಪ್ರದೇಶಗಳ ಗ್ರಾಪಂಗಳಲ್ಲಿ ಪೌರಕಾರ್ವಿುಕರನ್ನು ನೇಮಿಸಿಕೊಂಡು ಕನಿಷ್ಠ ವೇತನ ನೀಡಿ, ಪ್ರತಿದಿನ ವ್ಯಾಪ್ತಿಯ ಎಲ್ಲ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡುವ ಸದುದ್ದೇಶದಿಂದ ಈಗಾಗಲೇ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ರ್ಚಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಸ್ವಚ್ಛತೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಗ್ರಾಪಂಗಳಿಗೆ ಪೌರಕಾರ್ವಿುಕರನ್ನು ನೇಮಿಸಿದರೆ ಅನುಕೂಲವಾಗುತ್ತದೆ ಎಂದರು.

ತಾಲೂಕಿನ ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸ್ವಚ್ಛತೆಯ ಕುರಿತು ಜನರಿಗೆ ಅರಿವು ಮೂಡಿಸಬೇಕು. ಹಿರೇ ತೊಗಲೇರಿ ಗ್ರಾಮದ ಹೊರವಲಯದಲ್ಲಿ 2023 - 24 ನೇ ಸಾಲಿನ ಎಸ್​ಬಿಎಂಜಿ ಯೋಜನೆ ಅಡಿಯಲ್ಲಿ 2 ಕೋಟಿ 48 ಲಕ್ಷ ರೂ. ವೆಚ್ಚದಲ್ಲಿ ಆರ್​ಡಿಪಿಆರ್ ಇಂಜಿನಿಯರಿಂಗ್ ವಿಭಾಗದಿಂದ ನಿರ್ವಣಗೊಳ್ಳುತ್ತಿರುವ ತಾಲೂಕು ಮಟ್ಟದ ಕಸ ವಿಲೇವಾರಿ ಘಟಕ ಇದಾಗಿದ್ದು ಎಲ್ಲರೂ ನಿರ್ವಣದ ನಂತರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕುರ್ಕಿ ಗ್ರಾಪಂ ಅಧ್ಯಕ್ಷ ನಾಗಮ್ಮ, ಆರ್​ಡಿಪಿಆರ್ ಇಲಾಖೆ ಇ.ಇ. ಟಾಟಾ ಶಿವನ್, ಎ.ಇ.ಇ. ಶಿವಮೂರ್ತಿ, ಪಿಡಿಒ ಸುರೇಖಾ, ಮುಖಂಡರಾದ ನಂದೀಶ್, ನಿಂಗಪ್ಪ ಬಸವರಾಜು ವೆಂಕಟೇಶ್, ಹನುಮಂತಪ್ಪ, ನಳಿನಾಕ್ಷಿ, ವಿಶಾಲಮ್ಮ, ರಾಜಪ್ಪ, ವಾಸು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net