ಬಸವನಬಾಗೇವಾಡಿ ತಾಲೂಕಿನಲ್ಲಿ ಭೂಕಂಪನ ಅನುಭವಕ್ಕೆ ಮನೆಯಿಂದ ಹೊರಗೋಡಿ ಬಂದ್ರು ಜನ!

Earth quake symbolic
Published on

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕೆಲವೆಡೆ ನಿನ್ನೆ ರಾತ್ರಿ ಭೂಕಂಪದ ಅನುಭವವಾಗಿದ್ದು, ಅನೇಕರು ಆತಂಕಿತರಾಗಿ ಮನೆಯಿಂದ ಹೊರಗೋಡಿ ಬಂದು ಕೆಲ ಹೊತ್ತು ಅಲ್ಲೇ ಕಾಲಕಳೆದಿದ್ದಾರೆ.

ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ನಿನ್ನೆ ರಾತ್ರಿ 11.30ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಹೀಗಾಗಿ ಜೀವ ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವು ನಿದ್ದೆಗೆ ಜಾರಿದ್ದರೆ, ಇನ್ನು ಕೆಲವರು ಮೊಬೈಲ್ ನೋಡುತ್ತ ಮಲಗಿದ್ದುದ್ದಾಗಿ ಆ ಸಂದರ್ಭದ ವೈರಲ್ ವಿಡಿಯೋದಲ್ಲಿ ಜನ ಮಾತನಾಡುತ್ತಿರುವುದು ಕೇಳಿದೆ.

ರಾತ್ರಿ ಭೂಮಿ ನಡುಗಿದ್ದೇಕೆ ಎಂಬ ಕುತೂಹಲ ಜನರಲ್ಲಿ ಇದ್ದು, ಅಧಿಕಾರಿಗಳು ಭೂಕಂಪವನ್ನು ಏನೂ ದೃಢೀಕರಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net