

ರಿಪ್ಪನ್‌ಪೇಟೆ: ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ನಮ್ಮ ನಾಡಿನಲ್ಲಿ ಮುಂಜಾನೆ ಏಳುವಾಗ ಭೂಮಿಯ ಮೇಲೆ ಪಾದಸ್ಪರ್ಶ ಮಾಡುವ ಮೊದಲು ನಿನ್ನ ಮೇಲೆ ಅಡಿಯಿಡುತ್ತಿದ್ದೇನೆ ಕ್ಷಮಿಸು ತಾಯೆ ಎಂದು ಭೂ ಮಾತೆಯನ್ನು ಪ್ರಾರ್ಥಿಸುತ್ತೇವೆ. ಹೀಗಿರುವಾಗ ನಾವೇ ಇಂದು ಭೂಮಿಗೆ ಅನೇಕ ರೀತಿಯ ಅನಾಚಾರಗಳನ್ನು ಎಸಗುತ್ತಿದ್ದೇವೆ. ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ ಎಂದು ಶಿಕಾರಿಪುರ ವಲಯ ಅರಣ್ಯಾಽಕಾರಿ ರೇವಣಸಿದ್ಧಯ್ಯ ಬಿ. ಹಿರೇಮಠ ಎಚ್ಚರಿಸಿದರು.
ಪಟ್ಟಣ ವಿಶ್ವಮಾನವ ಸಮುದಾಯ ಭವನದಲ್ಲಿ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಜೀವವೈವಿಧ್ಯತೆ ಮತ್ತು ಪರಿಸರ ರಕ್ಷಣೆ ವಿಷಯವಾಗಿ ಉಪನ್ಯಾಸ ನೀಡಿ ಮಾತನಾಡಿದರು.
ದೇಶದಲ್ಲಿ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಮಣ್ಣನ್ನು ತಯಾರಿಸಲು ಸಾಧ್ಯವಿಲ್ಲ. ಅನಾದಿಕಾಲದಿಂದಲೂ ಜೀವಿಗಳಿರುವ ಒಂದೇ ಒಂದು ಗ್ರಹ ಎಂದರೆ ಅದು ಭೂಮಿ. ಇಲ್ಲಿರುವ ಪ್ರಾಣಿ, ಪಕ್ಷಿ, ಸಸ್ಯಗಳನ್ನು ನಾಶ ಮಾಡುವ ಹಕ್ಕು ಮನುಷ್ಯನಿಗಿಲ್ಲ. ಏಕೆಂದರೆ ಮನುಷ್ಯನಿಗಿಂತ ಮೊದಲು ಭೂಮಿಯ ಮೇಲೆ ಜೀವ ಸಂಕುಲಗಳಿದ್ದವು. ಪ್ರತಿಯೊಂದು ಜೀವಿಗಳಿಗೂ ಸರಪಳಿಯಂತೆ ಸಂಬAಧಗಳಿದ್ದು ಯಾವುದೇ ಒಂದು ಜೀವಿ ನಾಶವಾದರೂ ಇನ್ನುಳಿದವುಗಳ ಮೇಲೆ ಪರಿಣಾಮ ಬೀರಿ ಪರಿಸರದಲ್ಲಿ ಅಸಮಾನತೆ ಮೂಡುತ್ತದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ದುರಾಸೆಯಿಂದಾಗಿ ಮಣ್ಣು, ಗಾಳಿ, ನೀರು ಕಲುಷಿತಗೊಂಡು ಪ್ರತಿಯೊಂದು ಜೀವಿಯ ಮೇಲೆ ವ್ಯತಿರಿಕ್ತ ಪಡಿಣಾಮ ಬೀರುತ್ತಿದೆ. ಮೀತವಾಗಿ ನೀರು ಬಳಸದಿದ್ದರೆ ಮುಂದೊAದು ದಿನ ಕಣ್ಣಿನಲ್ಲಿ ಮಾತ್ರ ನೀರು ನೋಡಬೇಕಾಗಬಹುದು. ಈ ಎಲ್ಲ ಸಮಸ್ಯೆಗಳಿಗೆ ಸರಳ ಜೀವನವೇ ಪರಿಹಾರ. ಇದನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಲ್ಲಿ ಮುಂದಿನ ಪೀಳಿಗೆಗೆ ಶುದ್ಧ ಪರಿಸರ ಉಳಿಸಿಕೊಡಲು ಸಾಧ್ಯ ಎಂದು ತಿಳಿಸಿದರು.
ಕೋಣಂದೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಉಪಪ್ರಾಚಾರ್ಯೆ ಇ.ಟಿ.ಸೌಮ್ಯ ಅವರು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಯುವ ಜನತೆ ವಿಷಯದ ಕುರಿತು ಮಾತನಾಡಿ, ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಟ ಗುರಿ ಇರಬೇಕು. ಈ ನಿಟ್ಟಿನಲ್ಲಿ ಸತತ ಅಧ್ಯಯನ ಹಾಗೂ ನಿಯಮಾನುಸಾರ ಕಲಿಕೆ ಮಾಡಿದ್ದಲ್ಲಿ ಯಶಸ್ಸು ಸಾಧ್ಯ. ಯಾವ ವಿಷಯದಲ್ಲೂ ಸಾಧನೆ ಎಂಬುದು ಅಸಾಧ್ಯವಲ್ಲ. ಸಾಽಸುವ ಛಲ ಒಂದು ನಿಮ್ಮಲ್ಲಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಸಹಕಾರ್ಯದರ್ಶಿ ಸುಮಿತ್ರಾ ಅಧ್ಯಕ್ಷತೆ ವಹಿಸಿದ್ದು, ತಾಲೂಕು ಸಂಘದ ನಿರ್ದೇಶಕ ಎಂ.ಟಿ.ವೆAಕಟೇಶ, ಗ್ರಾಪಂ ಸದಸ್ಯೆ ದಾನಮ್ಮ, ಸಹಾಯಕ ಪ್ರಾಧ್ಯಾಪಕ ಐ.ಜೆ.ರಂಗಸ್ವಾಮಿ, ಶಿಬಿರಾಽಕಾರಿ ಎನ್.ಜೆ.ಪ್ರಕಾಶ್ ಉಪಸ್ಥಿತರಿದ್ದರು.