ಆಮರಣಾಂತ ಉಪವಾಸ ಸತ್ಯಾಗ್ರಹ ಎಚ್ಚರಿಕೆ

12byd1
Published on

ಬ್ಯಾಡಗಿ: ಬಡವರಿಗೆ ನಿವೇಶನ ಹಂಚಿಕೆಗೆ ಇನ್ನುಮುಂದೆ ವಿಳಂಬ ನೀತಿ ಅನುಸರಿಸಿದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಭ್ರಷ್ಟಾಚಾರ ವಿರೋಧಿ ಜನಾಂದೋಲನ ಸಮಿತಿ ನ್ಯಾಸದ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಬುಧವಾರ ನಿವೇಶನ ಹಂಚಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಪುರಸಭೆ ವ್ಯಾಪ್ತಿಯಲ್ಲಿ ಸಾವಿರಾರು ಬಡಜನರು ಮನೆಯಿಲ್ಲದೆ ಬೀದಿಯಲ್ಲಿ ವಾಸ ಮಾಡುವಂತಾಗಿದೆ. ನಾಲ್ಕು ವರ್ಷದ ಹಿಂದೆ ಸುಮಾರು 2 ಕೋಟಿ ರೂ. ಖರ್ಚುಮಾಡಿ 10 ಎಕರೆ ಭೂಮಿ ಖರೀದಿಸಲಾಗಿದೆ. ಆದರೆ, ಈವರೆಗೂ ಅರ್ಹರಿಗೆ ನಿವೇಶನ ಹಂಚಿಕೆ ನಡೆದಿಲ ಎಂದು ದೂರಿದರು.

ಮುಂದಿನ ಪುರಸಭೆ ಸಾಮಾನ್ಯ ಸಭೆಯಲ್ಲಿ ನಿವೇಶನ ನೀಡುವ ಕುರಿತು ಸ್ಟಷ್ಟ ನಿರ್ಣಯ ತೆಗೆದುಕೊಳ್ಳದಿದ್ದಲ್ಲಿ, ಪುರಸಭೆ ಕಾರ್ಯಾಲಯ ಎದುರು ಆಮರಣ ಉಪವಾಸ ಕುಳಿತುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಸಂಚಾಲಕಿ ಪರೀದಾಭಾನು ನದಿಮುಲ್ಲಾ ಮಾತನಾಡಿದರು.

ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಹಾಗೂ ಅಧಕ್ಷೆ ಕವಿತಾ ಸೊಪ್ಪಿನಮಠ, ಜಿ ಪ್ಲಸ್ ಮಾದರಿಯಲ್ಲಿ ಮನೆ ನಿರ್ವಿುಸಿಕೊಡಲು ಫಲಾನುಭವಿಗಳು 1-2 ಲಕ್ಷ ರೂ. ಹಣ ತುಂಬಬೇಕು. ಎಲ್ಲ ಬಡವರಿಗೂ ಹಣ ತುಂಬಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ. ಬೇರೆ ಬೇರೆ ಯೋಜನೆಯಲ್ಲಿ ಮನೆ ನಿರ್ವಿುಸಿಕೊಡಲು ಸಾಧ್ಯವೇ ಎಂದು ರ್ಚಚಿಸಿ ನಿರ್ಣಯ ಕೈಗೊಳ್ಳುತ್ತೇವೆ. ಶಿಡೇನೂರು ರಸ್ತೆಯ ಬಳಿ ಇರುವ ಸರ್ಕಾರಿ ಭೂಮಿಯಲ್ಲಿ ನಿವೇಶನ ಮಾಡಲು 10 ಎಕರೆ ಮಂಜೂರಾತಿಗೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಯಿಂದ ವಿಳಂಬವಾಗಿದೆ. ಮುಂದಿನ ಸಭೆಯಲ್ಲಿ ವಿಷಯ ರ್ಚಚಿಸಲಾಗುವುದು ಎಂದು ಭರವಸೆ ನೀಡಿದರು.

ಮಹಾದೇವಕ್ಕ ಕಾರಿ, ಸೀಮಾ ಪಾರು, ರೇಣುಕಾ ಗಡಾದ, ಶಾಂತಮ್ಮ ಕಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net