ಕಲಿಕಾಸಕ್ತಿಗೆ ಶಿಬಿರಗಳು ಪ್ರೇರಣೆ

3SND-06
ಸಿಂಧನೂರಿನ ಬಪ್ಪೂರ ರಸ್ತೆ ಮಾರ್ಗದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ವಸಂತ ಸಂಸ್ಕಾರ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಗಮನ ಸೆಳೆದ ಮಕ್ಕಳ ಡೊಳ್ಳು ಕುಣಿತ. ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ್, ಶಿಬಿರದ ತರಬೇತಿದಾರ ಲಕ್ಷ್ಮಯ್ಯ ಶ್ರೇಷ್ಠಿ, ಉದ್ಯಮಿ ಕೋಟೇಶ್ವರರಾವ, ಡೊಳ್ಳು ಕುಣಿತ ತರಬೇತಿದಾರ ಬೀರಪ್ಪ ಶಂಭೋಜಿ ಇದ್ದರು.
Published on

ಸಿಂಧನೂರು: ಮಕ್ಕಳಲ್ಲಿ ವಿವಿಧ ಚಟುವಟಿಕೆಯಲ್ಲಿ ಕಲಿಕಾಸಕ್ತಿ ಮೂಡಿಸುವಲ್ಲಿ ಶಿಬಿರ ಮಹತ್ವದ ಪಾತ್ರ ನಿರ್ವಹಿಸಿದ್ದು ನಮಗೂ ತೃಪ್ತಿ ತಂದಿದೆಂದು ರಾಮಕೃಷ್ಣ ವಿವೇಕಾನಂದಾಶ್ರಮ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ್ ಹೇಳಿದರು.

ನಗರದ ಬಪ್ಪೂರ ರಸ್ತೆ ಮಾರ್ಗದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶುಕ್ರವಾರ 21ದಿನಗಳ ಕಾಲ ಹಮ್ಮಿಕೊಂಡಿದ್ದ ವಸಂತ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಸಂತ ಸಂಸ್ಕಾರ ಶಿಬಿರ 21 ದಿನಗಳು ಯೋಗ, 7 ದಿನಗಳು ಡೊಳ್ಳು ಕುಣಿತ, 7ದಿನಗಳು ಸಂಸ್ಕೃತ ಮತ್ತು ಭಗವದ್ಗೀತೆ ಕಲಿಕೆ, 7 ದಿನಗಳು ಸಂಗೀತ ತರಗತಿಗಳು ಮಕ್ಕಳಿಗೆ, ಹಿರಿಯರಿಗೆ ಖುಷಿ ನೀಡಿವೆ. ಬೇಸಿಗೆಯಲ್ಲಿ ಇಂಥ ಅತ್ಯುಪಯುಕ್ತ ಕಾರ್ಯಕ್ರಮ ಮಾಡಿರುವುದಕ್ಕೆ ಹೆಮ್ಮೆ ಇದೆ. ಶಿಬಿರ ಯಶಸ್ವಿಗೆ ಎಲ್ಲರು ಸಹಕಾರ ನೀಡಿದ್ದಾರೆಂದರು.

ಶಿಬಿರದ ತರಬೇತಿದಾರ ಲಕ್ಷ್ಮಯ್ಯ ಶ್ರೇಷ್ಠಿ ಮಾತನಾಡಿ, ಇದೊಂದು ಮಹತ್ವದ ಶಿಬಿರ. ಪವಿತ್ರ ಸ್ಥಳದಲ್ಲಿ ದೇಶದ ಪರಂಪರೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಆಶ್ರಮ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಆಶ್ರಮದ ಕಾರ್ಯದ ಸೇವೆಗೆ ಸದಾಸಿದ್ಧವಾಗಿದ್ದೇವೆಂದರು. ಉದ್ಯಮಿ ಕೋಟೇಶ್ವರರಾವ, ಶಿಬಿರದ ಡೊಳ್ಳು ಕುಣಿತ ತರಬೇತಿದಾರ ಬೀರಪ್ಪ ಶಂಭೋಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net