ಶಿಕ್ಷಕರು ಸತಜೆಗಳ ನಿರ್ಮಾಪಕರು

14Kolavi1
Published on

ಕೊಳವಿ: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಶಿಲ್ಪಿ ಸುಂದರ ಶಿಲ್ಪಕಲೆಗೆ ಶ್ರಮಿಸಿದಂತೆ ಶಿಕರು ಒಳ್ಳೆಯ ವಿದ್ಯಾರ್ಥಿಗಳ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸುತ್ತಾರೆ. ಕಳೆದ ಸಾಲಿನ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಗೋಕಾಕ ತಾಲೂಕು ಮಟ್ಟದಲ್ಲಿ ಕೊಳವಿ ಶಾಲೆ ಪ್ರಥಮ ಸ್ಥಾನ ಪಡೆದಂತೆ ಈ ಬಾರಿಯೂ ಮೊದಲ ಸ್ಥಾನ ಗಳಿಸಿ ಊರಿನ ಕೀರ್ತಿ ಹೆಚ್ಚಿಸಬೇಕೆಂದು ೇತ್ರ ಸಮನ್ವಯಾಧಿಕಾರಿ ಎಸ್​.ವಿ. ಕುಲಕರ್ಣಿ ಹೇಳಿದರು.

ಸ್ಥಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಮುಖ್ಯಶಿಕ ಎಂ.ಬಿ. ಮುತ್ನಾಳ ಮಾತನಾಡಿ, ಪೋಷಕರ ನಿರೀೆಗೆ ಅನುಗುಣವಾಗಿ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ಎಸ್​ಎಸ್​ಎಲ್​ಸಿ ಮಕ್ಕಳು ಹೆಚ್ಚು ಅಂಕ ಪಡೆಯಲೆಂದು ಜಿಪಂ ಮಾಜಿ ಸದಸ್ಯ ಟಿ.ಆರ್​. ಕಾಗಲ್​ ಎರಡು ವರ್ಷಗಳಿಂದ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪುರವಣಿ ನೀಡುತ್ತಿದ್ದು, ಸದುಪಯೋಗ ಪಡೆಯಬೇಕು ಎಂದರು.

ಮಾದರಿ ಶಾಲೆಯನ್ನಾಗಿಸಲು ಪಾಲಕರು, ಗ್ರಾಪಂ ಆಡಳಿತ ಮಂಡಳಿ, ಯುವ ಶಿಣಪ್ರೇಮಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಮುಖ್ಯಅತಿಥಿಯಾಗಿ ಸಮಾಜ ಸೇವಕ ಮಾಣಿಕ ಹಿರಟ್ಟಿ ಮಾತನಾಡಿ, ಪರೀೆಯಲ್ಲಿ ಹೆಚ್ಚು ಅಂಕ ಗಳಿಸಲೆಂದು ರಜಾ ದಿನಗಳಲ್ಲೂ ಹೆಚ್ಚುವರಿ ತರಗತಿ ತೆಗೆದುಕೊಂಡು ಶಿಕ್ಷಕರು ಬೋಧನೆ ಮಾಡಿದ್ದಾರೆ. ಅವರ ಶ್ರಮಕ್ಕೆ ವಿದ್ಯಾರ್ಥಿಗಳು ತಕ್ಕ ಪ್ರತಿಲ ನೀಡಬೇಕು. ಪ್ರಸಕ್ತ ಪರೀೆಯಲ್ಲಿ 600ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವೆಯಕ್ತಿಕವಾಗಿ ಸೂಕ್ತ ಬಹುಮಾನ ನೀಡಲಾಗುವುದೆಂದರು.

ಗ್ರಾಪಂ ಸದಸ್ಯ ಅಡಿವೇಶ ಅಂಗಡಿ, ವಕೀಲ ಸಂಜು ಹಿರಟ್ಟಿ, ಶಿವಾನಂದ ಮಮದಾಪುರ, ಪಿಕೆಪಿಎಸ್​ ಕಾರ್ಯನಿರ್ವಾಹಕ ಬಾಳಯ್ಯ ಪೂಜಾರಿ, ಪತ್ರಿಕೆಯ ಸ್ಥಳಿಯ ವರದಿಗಾರ ಸಂಗಮೇಶ ಅಂಗಡಿ, ಸಹಶಿಕರಾದ ಎಸ್​.ಎಚ್​. ಭಜಂತ್ರಿ, ಬಿ.ಎ. ಮಲಗೌಡನವರ, ಮಹೇಶ್ವರಿ ಸರಕಪ್ಪಗೋಳ, ಎಸ್​.ಕೆ. ಬೆಂಡವಾಡ, ಕುಮಾರ ಬಡಿಗೇರ, ಶಿವಪ್ಪ ಗುಂಡ್ಯಾಗೋಳ ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು, ಎಸ್​.ಎಚ್​. ಬಳ್ಳಾರಿ ನಿರೂಪಿಸಿದರು. ಎ.ವೈ. ನಗಾರ್ಚಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net