ಪ್ರತಿಯೊಂದು ಕಾಯಕಕ್ಕೂ ತನ್ನದೇ ಮಹತ್ವವಿದೆ

gld 18-1
ಗುಳೇದಗುಡ್ಡ ಪಟ್ಟಣದಲ್ಲಿ ಗುರುಸಿದ್ಧೇಶ್ವರ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯರ 39ನೇ ಪುಣ್ಯಾರಾಧನೆ ಮತ್ತು ಗುರುಬಸವ ದೇವರ ಪಟ್ಟಾಭಿಷೇಕ ಹಾಗೂ ಶರಣ ಸಂಗಮ, ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ಸ್ವಾಮೀಜಿಗಳು, ಗಣ್ಯರು ಉದ್ಘಾಟಿಸಿದರು. ಕಣೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು, ಸಸ್ತಾಪುರದ ಡಾ. ಈಶ್ವರಾನಂದ ಶ್ರೀಗಳು, ಗುರುಸಿದ್ಧೇಶ್ವರ ಬ್ರಹನ್ಮಠದ ಬಸವರಾಜ ಪಟ್ಟದಾರ್ಯರು,ನಿಯೋಜಿತ ಪೀಠಾಧಿಕಾರಿ ಗುರುಬಸವ ದೇವರು, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಇತರರಿದ್ದರು.
Published on

ಗುಳೇದಗುಡ್ಡ: ಕಾಯಕದಲ್ಲಿ ಮೇಲು ಕೀಳಿಲ್ಲ. ಪ್ರತಿಯೊಂದು ಕಾಯಕಕ್ಕೂ ತನ್ನದೇ ಆದ ಮಹತ್ವವಿದೆ. ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹಿಸಬೇಕು. ನಮ್ಮ ಜಾತಿಯವರು ನಮ್ಮಲ್ಲೇ ಉಳಿಯಬೇಕು. ಬೇರೆ ಧರ್ಮಕ್ಕೆ ಮತಾಂತರಗೊಂಡ ದಲಿತ ಸಮಾಜದವರ ಮನವೊಲಿಸಿ ಹಿಂದು ಧರ್ಮಕ್ಕೆ ಮರಳಿ ತಂದು ಅವರಿಗೆ ಶಿಕ್ಷಣ, ಸಂಸ್ಕಾರ ನೀಡಿ ಸಮಾಜದ ಮುಖ್ಯವಾಹಿನಿಗೆ ಬರಮಾಡಿಕೊಂಡಿದ್ದೇವೆ ಎಂದು ಕಣೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಹೇಳಿದರು.

ಪಟ್ಟಣದಲ್ಲಿ ಗುರುಸಿದ್ಧೇಶ್ವರ ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 39ನೇ ಪುಣ್ಯಾರಾಧನೆ ಮತ್ತು ಗುರುಬಸವ ದೇವರ ಪಟ್ಟಾಭಿಷೇಕ ಹಾಗೂ ಶರಣ ಸಂಗಮ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮೀಜಿಗಳು ಮಠದ ಮಾಲೀಕರಲ್ಲ. ನಾವು ವ್ಯವಸ್ಥಾಪಕರಷ್ಟೇ. ನಿಜವಾದ ಮಾಲೀಕರು ಸಮಾಜದ ಭಕ್ತರು. ಸ್ವಾಮೀಜಿಗಳನ್ನು ಎಚ್ಚರಿಸುವ ಕೆಲಸವನ್ನು ಭಕ್ತರು ಮಾಡಬೇಕು. ಧಾರ್ಮಿಕ ಕ್ಷೇತ್ರಗಳಲ್ಲಿ ನಿಸ್ವಾರ್ಥದಿಂದ ವೃತ್ತಿ ಮಾಡಿ, ಅಲ್ಲಿ ಸ್ವಾರ್ಥದ ಭಾವನೆ ತೊರೆದು ಪ್ರತಿಯೊಬ್ಬರೂ ಧರ್ಮ ಕ್ಷೇತ್ರಗಳನ್ನು ಉಳಿಸಿ ಬೆಳೆಸುವಂತಾಗಬೇಕು. ಸನ್ಯಾಸಿಗಳು ಸನ್ಯಾಸಿಗಳಾಗಿಯೇ ಉಳಿಯಬೇಕು ಎಂದರು.

ದೇಶದ ದೊಡ್ಡ ದುರತವೆಂದರೆ ವರ್ಣದಲ್ಲಿ ಜಾತಿಗಳನ್ನು ತಂದಿದ್ದು, ಆದರೆ, ಹಿಂದೆ ಹಾಗಿರಲಿಲ್ಲ. ಜಾತಿಗಳಲ್ಲಿ ವರ್ಣಗಳಿದ್ದವು. ಕಣೇರಿ ಮಠಕ್ಕೆ ಎಲ್ಲ ಜಾತಿಯ ಭಕ್ತರಿದ್ದಾರೆ. ಜಂಗಮರ ಓಣಿಯಲ್ಲಿ, ಡೋಹರ ಓಣಿಯಲಿ ನಮ್ಮ ಮಠಗಳಿವೆ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ. ಅದಕ್ಕೆ ಪ್ರತಿರೂಪವಾಗಿ ಗುರುಸಿದ್ಧೇಶ್ವರ ಬ್ರಹನ್ಮಠ ಸಾಕ್ಷಿಯಾಗಿದೆ ಎಂದರು.

ಸಸ್ತಾಪುರದ ಡಾ. ಈಶ್ವರಾನಂದ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಗುರುಸಿದ್ಧೇಶ್ವರ ಬ್ರಹನ್ಮಠದ ಬಸವರಾಜ ಪಟ್ಟದಾರ್ಯರು,ನಿಯೋಜಿತ ಪೀಠಾಧಿಕಾರಿ ಗುರುಬಸವ ದೇವರು, ಬಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು, ಹಂಸನೂರು ಶಿವಾನಂದ ಮಠದ ಬಸವರಾಜೇಂದ್ರ ಶ್ರೀಗಳು, ಟೆಂಗಿನಮಠದ ಮಲ್ಲಿಕಾರ್ಜುನ ದೇವರು, ಮೈದರಂಗಿಯ ಮೃತ್ಯುಂಜಯ ಮಹಾಸ್ವಾಮಿಗಳು, ಗುರುಪಾದ ಶಿವಾಚಾರ್ಯರು, ರುದ್ರಾಕ್ಷಿಮಠದ ಅಲ್ಲಮಪ್ರಭು ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಶಂಕರ ಪೂಜಾರಿ, ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ರಾಜು ಜವಳಿ, ನಾಗೇಶಪ್ಪ ಪಾಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net