ಜನರಿರುವಲ್ಲಿಗೆ ತಾಲೂಕು ಆಡಳಿತ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

E Swattu Andolana mandya
Published on

ಮಂಡ್ಯ: ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಂದ ಕೆಲಸ ಮಾಡಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ತಾಲೂಕಿನ ನಲ್ಲಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಹೊಡಾಘಟ್ಟ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಇ ಸ್ವತ್ತು ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ವೃದ್ದಾಪ್ಯ, ಅಂಗವಿಕಲ ಹಾಗೂ ವಿಧವಾ ವೇತನಗಳ ಉಚಿತ ನೋಂದಣಿ ಕಾರ್ಯಕ್ರಮ, ನಿಂತು ಹೋಗಿರುವ ಪಿಂಚಣಿಗಳ ಮರು ಚಾಲನೆ ನೀಡುವುದು, ಗೃಹ ಲಕ್ಷ್ಮೀ ಯೋಜನೆ ತಲುಪದ ಫಲಾನುಭವಿಗಳ ಪರಿಶೀಲನೆ ನಡೆಸಿ ಅವರಿಗೆ ತಲುಪುವಂತೆ ಮಾಡಲು ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕಿನಾದ್ಯಂತ ಕೆಲ ರೈತರಿಗೆ ಯೋಜನೆಗಳು ತಲುಪುತ್ತಿಲ್ಲ ಎಂಬ ಆರೋಪವಿದ್ದು, ಅದನ್ನು ಸರಿಪಡಿಸಲಾಗುವುದು. ತಾಲೂಕು ಆಡಳಿತವನ್ನೇ ಜನರ ಬಳಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಎಲ್ಲವೂ ಸರಿಯಿರುತ್ತದೆ. ಈ ಹಿಂದೆ ಇದ್ದ ಆಡಳಿತದ ಬಗ್ಗೆ ಗೊತ್ತಿಲ್ಲ. ಇನ್ನು ಮುಂದೆ ನಮ್ಮ ಅಧಿಕಾರಿಗಳು ಜನರ ಕೆಲಸ ಮಾಡಿಕೊಡುತ್ತಾರೆ ಎಂದು ಭರವಸೆ ನೀಡಿದರು.

ತಹಸೀಲ್ದಾರ್ ಡಾ.ಶಿವಕುಮಾರ ಬಿರಾದರ್, ತಾ.ಪಂ ಇಒ ಎಂ.ಎಸ್.ವೀಣಾ, ತೋಟಗಾರಿಕೆ ಇಲಾಖೆ ಅಧಿಕಾರಿ ಶಶಿಕಲಾ, ಸಿಡಿಪಿಒ ಅಂಬಿಕಾ, ಬಿಇಒ ಸೌಭಾಗ್ಯ, ಆಯುಷ್ ಇಲಾಖೆಯ ಡಾ.ಅಂಬಿಕಾ, ಡಾ.ಪ್ರಸನ್ನ, ಡಾ.ಸೌಮ್ಯ, ಗ್ರಾ.ಪಂ ಅಧ್ಯಕ್ಷ ಬಿ.ಎಸ್.ಮಹೇಶ್, ಉಪಾಧ್ಯಕ್ಷೆ ಮಂಜುಳಾ, ಪಿಡಿಒಗಳಾದ ಕೋಮಲಾ, ಮಲ್ಲೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net