

ಗಂಗಾವತಿ: ಸಹಕಾರಿ ಕಾಯ್ದೆ ಬದಲಾವಣೆಗಳಿಗೆ ಮತ್ತು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಆಡಳಿತ ವ್ಯವಸ್ಥೆ ಬಲಪಡಿಸಬೇಕು ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಜಿ. ಶ್ರೀಧರ್ ಹೇಳಿದರು.
ಇದನ್ನೂ ಓದಿ:http://ಇ-ಸ್ಟಾಂಪಿಂಗ್ ತರಬೇತಿ ಕಾರ್ಯಾಗಾರ
ನಗರದ ಲಲಿತಮಹಲ್ ಸಭಾಂಗಣದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಪ್ರಾಂತೀಯ ಕಚೇರಿಯಿಂದ ಗುರುವಾರ ಆಯೋಜಿಸಿದ್ದ ಇ-ಸ್ಟಾಂಪಿಂಗ್ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಹಕಾರಿ ಕ್ಷೇತ್ರ ಬಲಪಡಿಸಲು ಹೊಸ ಆವಿಷ್ಕಾರಗಳ ತಾಂತ್ರಿಕತೆ ಬಳಸಿಕೊಳ್ಳಬೇಕಿದೆ. ನಿತ್ಯ ರಾಜ್ಯ ಸರ್ಕಾರಕ್ಕೆ ಕೋಟಿಗೂ ಹೆಚ್ಚು ರಾಜಸ್ವ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.
ಇ-ಸ್ಟಾಂಪಿಂಗ್ ಬಳಕೆ, ಪ್ರಯೋಜನ ಮತ್ತು ನಿರ್ವಹಣೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಜರುಗಿತು.
ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ನಾಗಲಿಂಗಪ್ಪ ಪತ್ತಾರ್, ಸಂಯುಕ್ತ ಸಹಕಾರಿ ಉಪ ಪ್ರಧಾನ ವ್ಯವಸ್ಥಾಪಕಿ ಆರ್.ಶೋಭಾ, ಸಂಯೋಜಕರಾದ ಓಂಕಾರ್ ಧರಣಿ, ವಿಜಯಶ್ರೀ ಇದ್ದರು.