

ಯಲ್ಲಾಪುರ: ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿಯಿಂದ ಇ ಸ್ಟಾಂಪ್ ಬಿಡುಗಡೆ ಕಾರ್ಯಕ್ರಮ ಏ. 1ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಮದ್ಗುಣಿ ಕಟ್ಟಡದಲ್ಲಿ ನಡೆಯಲಿದೆ ಎಂದು ತಾಲೂಕು ಸಮಿತಿ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಸಕ ಶಿವರಾಮ ಹೆಬ್ಬಾರ ಇ ಸ್ಟಾಂಪ್ ಬಿಡುಗಡೆಗೊಳಿಸಲಿದ್ದಾರೆ. ಇದರಿಂದ ಗುತ್ತಿಗೆದಾರರಿಗೆ ಹಾಗೂ ಸಾರ್ವಜನಿಕರಿಗೂ ಉಪಯುಕ್ತವಾಗಲಿದೆ. 2025-26ನೇ ಸಾಲಿನಲ್ಲಿ ಏಕರೂಪ ದರಪಟ್ಟಿ ಜಾರಿಗೆ ತರಲಾಗುತ್ತಿದ್ದು, ಅದನ್ನು ವಿದ್ಯುತ್ ಪರಿವೀಕ್ಷಕ ವಿಶ್ವನಾಥ ಅಂಗಡಿ ಬಿಡುಗಡೆಗೊಳಿಸಲಿದ್ದಾರೆ ಎಂದು ವಿವರಿಸಿದರು.
ಹೆಸ್ಕಾಂ ಅಧ್ಯಕ್ಷ ಸೈಯ್ಯದ್ ಅಜೀಮಪೀರ್ ಖಾದ್ರಿ ಅವರಿಗೆ ನಾಗರಿಕ ಸನ್ಮಾನ ನಡೆಯಲಿದೆ. ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ವಿದ್ಯುತ್ ಗುತ್ತಿಗೆದಾರರ ಸಂಘದ ಕೋಶಾಧ್ಯಕ್ಷ ಚಂದ್ರಬಾಬು, ಮಾರ್ಗದರ್ಶಿ ಸಮಿತಿ ಸದಸ್ಯ ತುಷಾರ ಬದ್ದಿ, ಹೆಸ್ಕಾಂ ಎಇಇ ರಮಾಕಾಂತ ನಾಯ್ಕ, ಇತರರು ಭಾಗವಹಿಸಲಿದ್ದಾರೆ ಎಂದರು.
ಸಹ ಕಾರ್ಯದರ್ಶಿ ರೀಗಜ್ ಡಿಸೋಜಾ, ಉಪಾಧ್ಯಕ್ಷ ದಿನೇಶ ರೇವಣಕರ, ಸತೀಶ ಹೆಗಡೆ, ಸಂಘಟನಾ ಕಾರ್ಯದರ್ಶಿ ಮಕ್ಬೂಲ್ ಹಲವಾಯಿಗರ ಇದ್ದರು.