

ರಾಯಬಾಗ: ಯಕ್ಸಂಬಾದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಶಾಖೆಗಳನ್ನು ಗ್ರಾಮೀಣ ಭಾಗದಲ್ಲಿ ಪ್ರಾರಂಭಿಸಿ, ರೈತರಿಗೆ ಮತ್ತು ಗ್ರಾಹಕರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ಭಿರಡಿ ಗ್ರಾಮದಲ್ಲಿರುವ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೇವೆಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಇ-ಸ್ಟ್ಯಾಂಪ್ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರಾಮು ನಿಶಾನಂದಾರ, ಮುರೇಂದ್ರ ನಿಶಾನಂದಾರ, ಮಹಾದೇವ ಬೋರಗಾಂವೆ, ಶ್ರೀಧರ ಕುಡಚೆ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪೂರೆ, ಸದಾಶಿವ ಹಳಿಂಗಳಿ, ವಿರೂಪಾಕ್ಷಿ ಕುಡಚೆ, ಶ್ರೀಕಾಂತ ಯಲಗುದ್ರೆ, ಮಲ್ಲಿಕಾರ್ಜುನ ಹೊಸುರ, ಪಾವರ್ತಿ ಗಂಗಾಯಿ, ಮಲ್ಲಿಕಾರ್ಜುನ ಡೊಣವಾಡೆ, ಗೋಪಾಲ ಬಹಾದ್ದೂರ, ಚಂದ್ರು ಅಂಕಲಿ, ಬಸವರಾಜ ಡೊಣವಾಡೆ, ಭೋಲಾ ಕಡಾಳೆ ಇತರರು ಇದ್ದರು.