6.80 ಲಕ್ಷ ರೂ. ಮೌಲ್ಯದ ನಿಷೇಧಿತ ಇ- ಹಾಗೂ ವಿದೇಶಿ ಸಿಗರೇಟ್ ವಶ

mng--30 march e sigarate 2
Published on

ಮಂಗಳೂರು: ಕೇಂದ್ರ ಸರ್ಕಾರದಿಂದ ನಿಷೇಧಿಸಲ್ಪಟ್ಟ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಐದು ಮಂದಿಯನ್ನು ಬಂಧಿಸಿರುವ ಬರ್ಕೆ ಠಾಣಾ ಪೊಲೀಸರು ಆರೋಪಿಗಳಿಂದ 1.50 ಲಕ್ಷ ರೂ. ಮೌಲ್ಯದ ಇ-ಸಿಗರೇಟ್, 5.30 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೇಟ್ ಸಹಿತ ಒಟ್ಟು 6,80,000 ರೂ. ಮೌಲ್ಯದ ಸಿಗರೇಟ್‌ವಶಪಡಿಸಿಕೊಂಡಿದ್ದಾರೆ.


ಆರೋಪಿಗಳಾದ ರೆಹಮತ್ತುಲ್ಲಾ, ಸಂತೋಷ್, ಶಿವು ಯಾನೆ ಶಿವಾನಂದ, ಹಸನ್ ಶರೀಫ್ ಮತ್ತು ಇರ್ಷಾದ್ ಬಂಧಿತರು.


ಈ ಆರೋಪಿಗಳು ನಗರದ ಲಾಲ್‌ಬಾಗ್‌ನ ಸಾಯಿಬೀನ್ ಕಾಂಪ್ಲೆಕ್ಸ್‌ನಲ್ಲಿನ ಆಮಂತ್ರಣ ಶಾಪ್, ಫ್ಯಾಂಟ್ಯಾಸ್ಟಿಕ್ ವರ್ಲ್ಡ್, ಯುನಿಕ್ ವರ್ಲ್ಡ್, ಡೂ ಇಟ್, ಫ್ಯಾಂಟಾಸ್ಟಿಕ್ ಶಾಪ್ ಮತ್ತು ವೆಂಚರ್ ಅಂಗಡಿಗಳಲ್ಲಿ ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ 1,50,000 ರೂ. ಮೌಲ್ಯದ 273 ಇ-ಸಿಗರೇಟ್‌ಗಳನ್ನು ವಶಕ್ಕೆ ಪಡೆದು ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಎಚ್ಚರಿಕೆಯ ಚಿಹ್ನೆ ಅಳವಡಿಸದ ಒಟ್ಟು 5,30,000 ರೂ. ಮೌಲ್ಯದ ವಿವಿಧ ವಿದೇಶಿ ಕಂಪೆನಿಗಳ ಸಿಗರೇಟ್ ತುಂಬಿರುವ ಪ್ಯಾಕ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಒಟ್ಟು ಸೊತ್ತುಗಳ ಮೊತ್ತ 6,80,000 ಎಂದು ಪೊಲೀಸರು ಅಂದಾಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net