

ಹೊಸಕೋಟೆ : ನಗರದ ಚನ್ನಬೈರೇಗೌಡ ಕ್ರೀಡಾಗಣದಲ್ಲಿ ಜು.20ರಂದು ಬೆಳಗ್ಗೆ 10.30ಕ್ಕೆ ತಾಲೂಕು ಪಂಚಾಯಿತಿ ಹಾಗೂ ತಾಲೂಕಿನ 28 ಗ್ರಾಮ ಪಂಚಾಯಿತಿಗಳಿಗೆ ಇ&ಸ್ವತ್ತು ಮತ್ತು ಹಕ್ಕು ಪತ್ರ ಹಾಗೂ ವಿವಿಧ ಯೋಜನೆಗಳ ಫಲನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶಾಸಕ ಶರತ್ ಬಚ್ಚೇಗೌಡ ಕಾರ್ಯಕ್ರಮದ ಪೂರ್ವ ಸಿದ್ಧತೆ ಪರಿಶೀಲಿಸಿದರು.
ಶಾಸಕ ಶರತ್ ಬಚ್ಚೇಗೌಡರ ಅಧ್ಯಕ್ಷತೆ ವಹಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಇಲಾಖೆ ಸಚಿವ ಪ್ರಿಯಂಕ ರ್ಖಗೆ, ವಸತಿ ಸಚಿವ ಜಮೀರ್ ಅಹ್ಮದ್ ಭಾಗಿಯಾಗಲಿದ್ದಾರೆ. 6700 ಇ&ಸ್ವತ್ತು ಹಾಗೂ 1035 ಹಕ್ಕು ಪತ್ರಗಳನ್ನು ವಿತರಿಸಲಾಗುವುದು.
ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಬೈರೇಗೌಡ, ಯೋಜನಾಪ್ರಾಧಿಕಾರದ ಅದ್ಯಕ್ಷ ಕೇಶವ ಮೂರ್ತಿ, ಜಿಪಂ ಸಿಇಒ ಅನುರಾಧಾ, ತಾಪಂಇಒ ಡಾ.ಸಿ.ಎನ್.ನಾರಾಯಣಸ್ವಾಮಿ, ಲೋಕೋಪಯೋಗಿ ಇಲಾಖೆ ಎಇಇ ಪ್ರಕಾಶ್, ಡಿವೈಎಸ್ಪಿ ಮಲ್ಲೇಶ್, ಪೊಲೀಸ್ ನಿರೀಕ್ಷಕ ಬಿ.ಟಿ.ಗೋವಿಂದ್, ಮಾಜಿ ಯೋಜನಾ ಪ್ರಾಧಿಕಾರದ ಅದ್ಯಕ್ಷ ಡಾ.ಸಿ.ಜಯರಾಜ್, ಸಧಾನಂದ್ ಇದ್ದರು.