ಇ-ಕೆವೈಸಿ ಮಾಡಿಸಲು ಮುಗಿಬಿದ್ದ ಗ್ರಾಹಕರು

Untitled design
ಕುಷ್ಟಗಿಯ ಭಾರತ್ ಗ್ಯಾಸ್ ವಿತರಣಾ ಕೇಂದ್ರದ ಮುಂದೆ ಗುರುವಾರ ಇ-ಕೆವೈಸಿ ಮಾಡಿಸಲು ಮುಗಿಬಿದ್ದಿರುವ ಗ್ರಾಹಕರು.
Published on

ಕುಷ್ಟಗಿ: ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ಡಿ.31ರೊಳಗೆ ಇ-ಕೆವೈಸಿ ಮಾಡಿಸಬೇಕು ಎಂಬ ವದಂತಿಗೆ ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳ ಗ್ರಾಹಕರು ಇಲ್ಲಿನ ಭಾರತ ಗ್ಯಾಸ್ ವಿತರಣಾ ಕೇಂದ್ರದ ಎದುರು ಮುಗಿಬೀಳುತ್ತಿದ್ದಾರೆ.


ಕಳೆದ ಮೂರ‌್ನಾಲ್ಕು ದಿನಗಳಿಂದ ಇ-ಕೆವೈಸಿಗೆಂದು ಬರುತ್ತಿರುವ ಗ್ರಾಹಕರ ಸಂಖ್ಯೆ ಗುರುವಾರ ಹೆಚ್ಚಾಗಿದ್ದು ಕಂಡುಬಂತು. ಪರಸ್ಪರ ನೂಕುನುಗ್ಗಲು ಏರ್ಪಡುತ್ತಿದ್ದು, ನಿಯಂತ್ರಿಸಲು ವಿತರಣಾ ಕೇಂದ್ರದ ಸಿಬ್ಬಂದಿ ಪರದಾಡುತ್ತಿದ್ದಾರೆ. ಇ-ಕೆವೈಸಿ ಮಾಡಿಸಲು ಯಾವುದೇ ಗಡುವು ನೀಡಿಲ್ಲ. ವದಂತಿಗೆ ಜನ ಬರುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ವಿತರಕ ಪ್ರಶಾಂತ ಪಾಟೀಲ್, ಇ-ಕೆವೈಸಿಗೆ ಯಾವುದೇ ಗಡುವು ನೀಡಿಲ್ಲ. ಮನೆಯಲ್ಲಿಯೇ ಮೊಬೈಲ್‌ನಲ್ಲಿಯೂ ಮಾಡಿಕೊಳ್ಳಬಹುದು. ಎಷ್ಟು ತಿಳಿ ಹೇಳಿದರೂ ಜನ ಬರುತ್ತಲೇ ಇದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net