

ಮಂಡ್ಯ: ಜಿಲ್ಲೆಯ ಬಿಪಿಎಲ್ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರ ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಈವರೆಗೆ ಶೇ.96.01ರಷ್ಟು ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಿಕೊಂಡಿರುತ್ತಾರೆ.
ಉಳಿದ 61,207 ಸದಸ್ಯರು ಇ-ಕೆವೈಸಿ ಮಾಡಿಕೊಳ್ಳಲು ಬಾಕಿ ಇರುತ್ತದೆ. ರಾಜ್ಯ ಸರ್ಕಾರವು ಆ.31ರೊಳಗೆ ಮಾಡಿಸಿಕೊಳ್ಳಲು ಅಂತಿಮ ಗಡುವು ನೀಡಿದೆ. ಇ-ಕೆವೈಸಿ ಆಗದ ಪಡಿತರ ಚೀಟಿಗಳಿಗೆ ಪಡಿತರ ಹಂಚಿಕೆ ನಿಲ್ಲುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.