ಇ-ಕೆವೈಸಿ ಮಾಡಿಸಲು ನೂಕುನುಗ್ಗಲು: ಗ್ಯಾಸ್ ಏಜೆನ್ಸಿ ಎದುರು ಜನಸಂದಣಿ

E-KYC Gas Subsidy mandya
Published on

ಮಂಡ್ಯ: ಗ್ಯಾಸ್‌ನ ಸಹಾಯಧನ ಪಡೆಯಲು ಗ್ರಾಹಕರು ಡಿಸೆಂಬರ್ ಒಳಗೆ ಇ-ಕೆವೈಸಿ ಮಾಡಿಸಬೇಕೆನ್ನುವ ಮಾಹಿತಿ ಹರಿದಾಡಿದ ಹಿನ್ನೆಲೆಯಲ್ಲಿ ಏಜೆನ್ಸಿ ಎದುರು ಜನಸಂದಣಿ ಹೆಚ್ಚಾಗಿದೆ.

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ಗ್ಯಾಸ್ ಏಜೆನ್ಸಿ ಮಾಲೀಕ ಎಚ್.ತ್ಯಾಗರಾಜು, ಇ-ಕೆವೈಸಿ ಮಾಡಿಸಲು ಡಿ.31 ಕೊನೆಯ ದಿನ ಎಂದು ಕೆಲವರು ಸುಳ್ಳುಸುದ್ದಿ ಹಬ್ಬಿಸಿದ್ದಾರೆ. ಇದರಿಂದಾಗಿ ಗ್ರಾಹಕರು ಆತಂಕಕ್ಕೆ ಒಳಗಾಗಿ ಏಜೆನ್ಸಿ ಎದುರು ಜಮಾಯಿಸುತ್ತಿದ್ದಾರೆ. ಆದರೆ ಇ-ಕೆವೈಸಿ ಮಾಡಿಸಲು 2024 ಜನವರಿ ಅಂತ್ಯದವರೆಗೂ ಕಾಲಾವಕಾಶವಿದೆ. ಹಾಗಾಗಿ ಗ್ರಾಹಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದರು.

ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇ-ಕೆವೈಸಿ ಮಾಡಿಸಲು ತಮ್ಮ ಏಜೆನ್ಸಿ ವತಿಯಿಂದಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇ-ಕೆವೈಸಿ ಮಾಡಿಸಲಾಗುವುದು. ಆ ಸಂದರ್ಭದಲ್ಲಿ ಗ್ರಾಹಕರು ಮಾಡಿಸಬಹುದು. ಇ-ಕೆವೈಸಿ ಮಾಡಿಸಲು ಬರುವಂತಹ ಗ್ರಾಹಕರು ಕಡ್ಡಾಯವಾಗಿ ಗ್ಯಾಸ್ ಫಾಸ್‌ಬುಕ್ ಹಾಗೂ ಆಧಾರ್ ಕಾರ್ಡ್‌ನ್ನು ತೆಗೆದುಕೊಂಡು ಬರಬೇಕೆಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net