ಇ-ಖಾತಾ ಅಭಿಯಾನಕ್ಕೆ ಚಾಲನೆ

E-Khata campaign launched
ಕೆರೂರ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಇ-ಖಾತೆ ಅಭಿಯಾನಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ಚಾಲನೆ ನೀಡಿದರು. ಬಸವರಾಜ ಕಟ್ಟಿಮನಿ, ಮಾಂತೇಶ ಮನ್ನೆನ್ನವರ, ಸಂತೋಷ ಗದ್ದನಕೇರಿ ಮತ್ತಿತರರಿದ್ದಾರೆ.
Published on

ಕೆರೂರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲ ಆಸ್ತಿಗಳನ್ನು ಇ-ಖಾತೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಎ ಹಾಗೂ ಬಿ ಖಾತಾ ಯೋಜನೆ ಜಾರಿಗೊಳಿಸಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ತಿಳಿಸಿದರು.

ಪಟ್ಟಣದಲ್ಲಿ ಗುರವಾರ ಇ-ಖಾತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲ ಅಧಿಕೃತ ಆಸ್ತಿ ಮಾಲೀಕರು, ತಮ್ಮ ಆಸ್ತಿಗೆ ಸಂಬಂಧಿಸಿದ ಖರೀದಿ ಪತ್ರ, ದಾನ ಪತ್ರ, ವಿಭಾಗ ಪತ್ರ, ಹಕ್ಕು ಪತ್ರ, ಚಾಲ್ತಿಯಲ್ಲಿರುವ ಋಣಭಾರ, ನಿವೇಶನ ಬಿಡುಗಡೆ ಪತ್ರ ಹಾಗೂ ನೀರಿನ ಕರ ರಶೀದಿ ಮತ್ತಿತರ ಪೂರಕ ದಾಖಲೆಗಳೊಂದಿಗೆ ಪಟ್ಟಣ ಪಂಚಾಯಿತಿ ಕಂದಾಯ ವಿಭಾಗಕ್ಕೆ ತೆರಳಿ ಅರ್ಜಿ ಸಲ್ಲಿಸಿ ಎ-ಖಾತೆ ಡಿಜಿಟಲ್ ಪತ್ರವನ್ನು ಪಡೆಯಬಹುದು ಎಂದರು. ಅದೇ ರೀತಿ ಸಮಪರ್ಕ ದಾಖಲೆಗಳಿಲ್ಲದ ಅನಧಿಕೃತ ನಿವೇಶನಗಳ ಮಾಲೀಕರು ಇ-ಖಾತೆಯಿಂದ ವಂಚಿತರಾಗಬಾರದೆಂದು ಸರ್ಕಾರ ಅನಧಿಕೃತ ಆಸ್ತಿಗಳಿಗೆ ಸಹ ಬಿ-ಖಾತೆ ನೀಡುತ್ತಿದೆ. ಅನಧಿಕೃತ ಆಸ್ತಿ ಮಾಲೀಕರು ಚಾಲ್ತಿ ಆಸ್ತಿ ತೆರಿಗೆ ಹಾಗೂ ನೀರಿನ ಕರ ಪಾವತಿಸಿ, ಅಗತ್ಯ ದಾಖಲೆ ಒದಗಿಸಿ ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪಟ್ಟಣ ಪಂಚಾಯಿತಿ ಸಿಬ್ಬಂದಿ ಬಸವರಾಜ ಕಟ್ಟಮನಿ, ಮಾಂತೇಶ ಮನ್ನೆನ್ನವರ, ಸಂತೋಷ ಗದ್ದನಕೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net