ಮೇ 10ರವರೆಗೆ ಜಿಲ್ಲೆಯಲ್ಲಿ ಇ-ಖಾತಾ ಅಭಿಯಾನ

dc vidyakumari k
Published on

ಉಡುಪಿ: ಅನಧಿಕೃತ ಲೇಔಟ್​ಗಳಿಗೆ ಬಿ-ಖಾತೆ ಕೊಡಲು ಸರ್ಕಾರ ನಿರ್ದೇಶನ ನೀಡಿದ್ದು, ಜಿಲ್ಲೆಯ ಎಲ್ಲಾ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಮೇ 10ರವರೆಗೆ ಇ-ಖಾತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 1546, ಕಾಪು ಪುರಸಭಾ ವ್ಯಾಪ್ತಿಯಲ್ಲಿ 2784, ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 702, ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ 152, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 336, ಬೈಂದೂರು ಪಟ್ಟಣಪಂಚಾಯಿತಿ ವ್ಯಾಪ್ತಿಯಲ್ಲಿ 329 ಸೇರಿದಂತೆ ಒಟ್ಟು 5849 ಆಸ್ತ್ತಿಗಳನ್ನು ಗುರುತಿಸಲಾಗಿದೆ. ಈಗಾಗಲೇ ಈ ಸ್ವತ್ತುಗಳಿಗೆ ತೆರಿಗೆ ಪಾವತಿಸುತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಇದಕ್ಕಿಂತಲೂ ಹೆಚ್ಚಿನ 3 ಪಟ್ಟು ಆಸ್ತಿಗಳಿವೆ ಎಂಬುದಾಗಿ ಅಂದಾಜಿಸಲಾಗಿದೆ. ಬಿ&ಖಾತೆ ಪಡೆದವರಿಗೆ ಪಿಐಡಿ ಸಂಖ್ಯೆ ನೀಡಲಾಗುತ್ತಿದ್ದು, ನಿವೇಶನ ಮಾರಾಟ, ನೋಂದಣಿಗೆ ಅನುಕೂಲವಾಗಲಿದೆ ಎಂದರು.

ಏನೆಲ್ಲಾ ದಾಖಲೆ ನೀಡಬೇಕು?

ಇ-ಖಾತಾ ಪಡೆಯಲು ಗುರುತಿನ ಚೀಟಿ, ಆಸ್ತಿ ಮಾಲೀಕರ ೋಟೋ, ಮಾಲೀಕತ್ವ ದೃಢೀಕರಿಸುವ ದಾಖಲೆಗಳು, ಸ್ವತ್ತಿನ ಋಣಭಾರ ಪ್ರಮಾಣಪತ್ರ, ಸ್ವತ್ತಿನ ಛಾಯಾಚಿತ್ರ, ಆಸ್ತಿ ತೆರಿಗೆ ಪಾವತಿಸಿದ ರಶೀದಿಗಳೊಂದಿಗೆ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಬಹುದು. ಆಸ್ತಿಗಳಿಗೆ ಮೊದಲ ಬಾರಿಗೆ ಶೇ.200ರಷ್ಟು ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಪಾವತಿಸಿ ದಾಖಲೆಗಳನ್ನು ಪಡೆಯಬಹುದು ಎಂದರು.

2 ಪ್ರಕರಣ ದಾಖಲು

ಮೈಕ್ರೋೈನಾನ್ಸ್​ ನಿಯಂತ್ರಣ ಕಾಯ್ದೆ ಪ್ರಕಾರ ಎಲ್ಲಾ ಹಣಕಾಸು ಲೇವಾದೇವಿ ವ್ಯವಹಾರಸ್ಥರು 30 ದಿನದೊಳಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ ಸಾಲಗಾರರಿಗೆ ಕಿರುಕುಳ ನೀಡುವ ಬಗ್ಗೆ ಉಡುಪಿ ಠಾಣೆಯಲ್ಲಿ 2 ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು.

ಸುಪ್ರೀಂ ಕೋರ್ಟ್​ ಆದೇಶ ಪಾಲನೆ

ಯಕ್ಷಗಾನ ಪ್ರದರ್ಶನ ಆಯೋಜಕರು ಸ್ಥಳಿಯ ಗ್ರಾಪಂನಿಂದ ಅನುಮತಿ ಪಡೆಯಬೇಕು. 10 ಗಂಟೆವರೆಗೆ ಮಾತ್ರ ಮೈಕ್​ ಉಪಯೋಗಿಸುವ ಮೂಲಕ ಸುಪ್ರೀಂ ಕೋರ್ಟ್​ ಆದೇಶವನ್ನು ಪಾಲನೆ ಮಾಡಬೇಕು. ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀೆಗಳು ಸಮೀಪಿಸುತ್ತಿರುವುದರಿಂದ ತಡರಾತ್ರಿವರೆಗೆ ಮೈಕ್​ ಬಳಕೆ ಸೂಕ್ತವಲ್ಲ. ಸಂಪ್ರದಾಯ ಪಾಲನೆ ಮಾಡುವ ದೃಷ್ಟಿಯಿಂದ ಕೋಳಿ ಅಂಕಗಳಿಗೆ ಅನುಮತಿ ನೀಡಲಾಗುತ್ತದೆ. ಇದನ್ನು ಜೂಜು ರೀತಿ ಬಳಸಿಕೊಳ್ಳಲು ಅವಕಾಶವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net