ಕಡೂರು ಪುರಸಭೆಯಿಂದ ಇ-ಖಾತಾಅಭಿಯಾನ

26 kdr3 (bandari srinivas)
Published on

ಕಡೂರು: ಸರ್ಕಾರದ ವಿಶೇಷ ಯೋಜನೆಯಡಿಯಲ್ಲಿ ಇ-ಖಾತಾ ಅಭಿಯಾನ ಆರಂಭಿಸಿದ್ದು, ಪುರಸಭೆ ವ್ಯಾಪ್ತಿಗೆ ಸೇರುವ ನೂತನ ಬಡಾವಣೆಗಳ ಮಾಲೀಕರು ಅನಧಿಕೃತ ಸ್ವತ್ತುಗಳಿಗೆ ಮೂರು ತಿಂಗಳಗಳೊಗಾಗಿ ಇ-ಖಾತಾ ಮಾಡಿಸಿಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ಜತೆ ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಂಡು ವಿಶೇಷ ಯೋಜನೆ ರೂಪಿಸಿ ಅನಧಿಕೃತ ಆಸ್ತಿಗಳಿಗೆ ಬಿ. ರಿಜಿಸ್ಟರ್‌ನಲ್ಲಿ ನಮೂದಿಸಿ ಮಾಲೀಕರಿಗೆ ಇ-ಖಾತಾ ಮಾಡಿಕೊಡಲು ಸ್ಥಳೀಯ ಸಂಸ್ಥೆಗಳಿಗೆ ಅದೇಶಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದಕ್ಕಾಗಿ ಪುರಸಭೆ ಮುಖ್ಯಾಧಿಕಾರಿ ಮತ್ತು ಅಧಿಕಾರಿಗಳ ತಂಡ ಇ-ಖಾತಾ ಅಭಿಯಾನ ಪ್ರಾರಂಭಿಸಿದ್ದು , ಖಾತೆಯಾಗದೆ ಕಟ್ಟಡ ನಿರ್ಮಾಣ ಮಾಡಿದ್ದರೆ ಎರಡರಷ್ಟು ಹೆಚ್ಚಿನ ಕಂದಾಯ ಪಾವತಿಸಿಕೊಂಡು ಖಾತಾ ಮಾಡಿಕೊಡಲಾಗುವುದು. ಮಾಹಿತಿಗೆ ಪುರಸಭೆ ಮುಖ್ಯಾಧಿಕಾರಿ, ಕಂದಾಯ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಮಾತನಾಡಿ, ಇ-ಖಾತಾ ನೀಡಲು ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ 10-9-2024ರ ಪೂರ್ವದಲ್ಲಿ ನೋಂದಾಯಿಸಿದ ಮಾರಾಟ ಪತ್ರ, ದಾನಪತ್ರ, ವಿಭಾಗ ಪತ್ರ, ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿತೆರಿಗೆ ಪಾವತಿ ರಸೀದಿ, ಮಾಲೀಕರ ಪೋಟೊ ಮತ್ತು ಸ್ವತ್ತಿನ ಪೋಟೊ, ಗುರುತಿನ ದಾಖಲೆ ಪತ್ರ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net