ಇ-ಖಾತಾ ಅಭಿಯಾನದ ಸದ್ಬಳಕೆ ಮಾಡಿಕೊಳ್ಳಲಿ

21blh6 tmc news
Published on

ಬೈಲಹೊಂಗಲ: ರಾಜ್ಯ ಸರ್ಕಾರವು ಪುರಸಭೆ ವ್ಯಾಪ್ತಿಯಲ್ಲಿನ ಅನಕೃತ ಸ್ವತ್ತುಗಳಿಗೆ ಸಹ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಇದರಿಂದ ಅನಕೃತ ಸ್ವತ್ತು (ಬಿ-ಖಾತಾ)ಗಳ ಮಾಲೀಕರು ತಮ್ಮ ಸ್ವತಿನ ಕಂದಾಯವನ್ನು ಪಾವತಿಸಿ, ಇ-ಖಾತಾ ಪಡೆಯಬಹುದಾಗಿದೆ. ಈ ಅಭಿಯಾನವನ್ನು ಪಟ್ಟಣದ ವ್ಯಾಪ್ತಿಯ ಜನರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ಪುರಸಭೆಯಲ್ಲಿ ಇ-ಖಾತಾ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನ, ಮನೆಯ ಆಸ್ತಿ ಹೊಂದಿರುವವರು ದಾಖಲೆ ಸಮೇತ ಪುರಸಭೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಕೂಡಲೇ ಇ-ಖಾತಾ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಲಾಗಿದ್ದು ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಮೂರು ತಿಂಗಳ ಕಾಲ ಖಾತೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಖಾತೆ ಮಾಡಿಸಿಕೊಳ್ಳಲು ಯಾವುದೇ ಮಧ್ಯವರ್ತಿಗಳನ್ನು ನಂಬಬೇಡಿ ನಂಬಿದಲ್ಲಿ ಮೋಸ ಹೋಗುತ್ತೀರಿ. ಖಾತೆ ಮಾಡಲು ನೇರವಾಗಿ ಸಾರ್ವಜನಿಕರೇ ಪುರಸಭೆ ಕಚೇರಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿ ಇ ಖಾತಾ ಪಡೆದುಕೊಳ್ಳಬೇಕು. ಪ್ರತಿ ವಾರ್ಡಿನಲ್ಲಿ ಇ-ಖಾತಾ ಕುರಿತು ವಾರ್ಡ್ ಸದಸ್ಯರ ನೇತೃತ್ವದಲ್ಲಿ ಜಾಗೃತಿ ಅಭಿಯಾನ ಮೂಡಿಸಲಾಗುವುದು ಎಂದರು.

ಪುರಸಭೆ ಮುಖ್ಯಾಕಾರಿ ವೀರೇಶ ಹಸಬಿ ಮಾತನಾಡಿ, ಸ್ವತ್ತಿನ ಮಾಲೀಕರು ಪುರಸಭೆಗೆ ಭೇಟಿ ನೀಡಿ, ಸ್ವತ್ತಿನ ಮಾಲೀಕತ್ವದ ದಾಖಲೆಗಳಾದ ನೋಂದಾಯಿತ ಪತ್ರಗಳು, ಚಾಲ್ತಿ ಸಾಲಿನವರೆಗೆ ಕಂದಾಯ ಪಾವತಿ ರಶೀದಿ, ಋಣಭಾರ ಪ್ರಮಾಣ ಪತ್ರ ಹಾಗೂ ಮಾಲೀಕರ ಪೋಟೊ, ಆಧಾರ ಕಾರ್ಡ್ ಸಲ್ಲಿಸಿ ಇ-ಖಾತಾ ಪಡೆಯಬಹುದಾಗಿದೆ ಎಂದರು.

ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ ಸಾರ್ವಜನಿಕರಿಗೆ ಇ ಖಾತಾ ಪ್ರತಿ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.

ಉಪಾಧ್ಯಕ್ಷ ಬುಡ್ದೆಸಾಬ ಶಿರಸಂಗಿ, ಸದಸ್ಯರಾದ ಬಾಬು ಕುಡಸೋಮಣ್ಣವರ, ಬಸವರಾಜ ಜನ್ಮಟ್ಟಿ, ಜಗದೀಶ ಜಂಬಗಿ, ಸುೀರ ವಾಲಿ, ಶಿವಾನಂದ ಕೋಲಕಾರ, ಅರ್ಜುನ ಕಲಕುಟಕರ, ಶಿವಬಸ್ಸು ಕುಡಸೋಮನ್ನವರ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಹಿರೇಮಠ, ಅಮೀರಾಬಿ ಭಾಗವನ,ಅಂಜನಾ ಬೊಂಗಾಳೆ, ಶ್ರೀದೇವಿ ದೇವಲಾಪುರ, ಕಚೇರಿ ವ್ಯವಸ್ಥಾಪಕ ಎಂ.ಐ. ಕುಟ್ರಿ, ಕಂದಾಯ ಅಕಾರಿ ಎಸ್.ಆರ್.ಹಳ್ಳೂರ, ಕಂದಾಯ ನಿರೀಕ್ಷಕ ಬಿ.ಕೆ.ಮಠದ, ಅಭಿಯಂತ ಜಿ.ಬಿ.ಮಹಾಳಂಕ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net