

ಹೊಸಪೇಟೆ: ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕೋಧ್ಯಮ ಸಂಘ, ರೋಟರಿ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಆಶ್ರಯದಲ್ಲಿ ಇ-ಇನ್‌ವೈಸಿಂಗ್ ಮತ್ತು ಜಿ.ಎಸ್.ಟಿ. ಕುರಿತು ನಗರದ ರೋಟರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ವಾಣಿಜ್ಯ ತೆರಿಗೆ ಇಲಾಖೆಯ ಡೆಪ್ಯೂಟಿ ಕಮಿಷನರ್ ಯಶೋಧ ಹೊಸೂರ್ ಉದ್ಘಾಟಿಸಿದರು.
ವಾಣಿಜ್ಯ ತೆರಿಗೆ ಇಲಾಖೆಯ ಅಸಿಸ್‌ಟೆಂಟ್ ಕಮಿಷನರ್ ಗರ್ಜಿ ಲಿಂಗಪ್ಪ, ಅಸಿಸ್‌ಟೆಂಟ್ ಕಮಿಷನರ್ (ಎನ್‌ಪರ‍್ಸ್ಮೆಂಟ್) ರಾಜಶೇಖರ್ ಬಿ., ಟ್ಯಾಲಿ ಸಲ್ಯೂಷನ್ಸ್ ಬೆಂಗಳೂರು ಸಹ ಪ್ರಧಾನ ವ್ಯವಸ್ಥಾಪಕ ಷಣ್ಮುಖ ಸಿ.ಜಿ. ಅವರು ಕೇಂದ್ರ ಸರ್ಕಾರದ ಕರ್ ಸಮಾದಾನ್ ಯೋಜನೆ, ಜಿ.ಎಸ್.ಟಿ. ಅಸಿಸ್‌ಮೆಂಟ್, ಇ-ಇನ್‌ವೈಸಿಂಗ್ ಮತ್ತು ಇ-ವೇಬಿಲ್‌ಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ವೇದಿಕೆ ಮೇಲೆ ರಾಜಶೇಖರ್ ಬಿ., ಚೆಂಬರ್ ಆಫ್ ಕಾಮರ‍್ಸ್ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ, ಕಾರ್ಯದರ್ಶಿ ಕಾಕುಬಾಳು ರಾಜೇಂದ್ರ, ತೆರಿಗೆ ಕಮಿಟಿಯ ಚೇರ್‌ಮನ್ ವಿಜಯ ಸಿಂಧಗಿ, ರೋಟರಿ ಕ್ಲಬ್ ಅಧ್ಯಕ್ಷ ಆರ್.ಸತ್ಯನಾರಾಯಣ, ಕಾರ್ಯದರ್ಶಿ ಕೆ.ಎಸ್.ದಾದಾಪೀರ್, ರೈಟ್‌ವೇ ಸಲ್ಯೂಷನ್ಸ್ನ ಕಿರಣ್‌ಕುಮಾರ್ ಮತ್ತು ಅಂಬಿಕಾ ಕಟ್ಟಿ ಉಪಸ್ಥಿತರಿದ್ದರು.