

ಚಿತ್ರದುರ್ಗ: ಚಿತ್ರದುರ್ಗ ಮಠದ ಕುರುಬರಹಟ್ಟಿ ಗ್ರಾಪಂ ವ್ಯಾಪ್ತಿ ಗುತ್ತಿನಾಡು ಹಾಗೂ ಎಂ.ಆರ್.ನಗರದಲ್ಲಿ ಬುಧವಾರ,ಮನೆ ಬಾಗಿಲಿಗೆ ಇ-ಸ್ವ ತ್ತು ಪ್ರಮಾಣ ಪತ್ರ ವಿತರಣೆಗೆ ಜಿ.ಪಂ.ಸಿಇಒ ಎಂ.ಎಸ್.ದಿವಾಕರ್ ಚಾಲನೆ ನೀಡಿದರು.
ರಾಜ್ಯದಲ್ಲೇ ಮೊದಲ ಬಾರಿಗೆ,ಮನೆ ಬಾಗಿಲಿಗೆ ಇ-ಸ್ವತ್ತು ವಿತರಿಸುವ ವಿನೂತನ ಕಾರ‌್ಯಕ್ರಮ ಇದಾಗಿದೆ. ಗುತ್ತಿನಾಡಿನಲ್ಲಿ ಪ್ರಾರಂಭ ವಾಗಿದೆ ಎಂದು ದಿವಾಕರ್ ಹೇಳಿದರು. ಇದರಿಂದ ಅನಗತ್ಯ ವಿಳಂಬ ಮತ್ತು ಮದ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದ್ದು, ಈ ಕಾ ರ‌್ಯಕ್ರಮವನ್ನು ಜಿಲ್ಲೆಯ ಎಲ್ಲ(189)ಗ್ರಾಪಂಗಳ ವ್ಯಾಪ್ತಿಯಲ್ಲೂ ಜಾರಿಗೊಳಿಸಲಾಗುವುದು.
ಕಂದಾಯ ಬಾಕಿ ವಸೂಲಿ,ವಿಳಂಬವಿಲ್ಲದೇ ಸರ್ಕಾರಿ ಸೇವೆ ಒದಗಿಸುವ ಮೂಲಕ ಜನ ಸ್ನೇಹಿ ಆಡಳಿತಕ್ಕೆ ಒತ್ತು ನೀಡಲಾಗುವುದು. ಗ್ರಾಪಂ ಸಿಬ್ಬಂದಿ 10-15 ದಿನ ಮೊದಲು,ನಿವಾಸಿಗಳ ದಾಖಲೆ ಪಡೆಯುತ್ತಾರೆ. ಅವುಗಳನ್ನು ಪರಿಶೀಲಿಸಿ,ತೆರಿಗೆಗಳನ್ನು ಜಮಾ ಮಾಡಿಸಿ ಕೊಂಡು,ನಿವಾಸಿಗಳ ಮನೆಗೆ ತೆರಳಿ ಇ-ಸ್ವತ್ತು ವಿತರಿಸುವರು ಎಂದರು. ಗುತ್ತಿನಾಡು ಹಾಗೂ ಎಂ.ಆರ್.ನಗರದ 80ಕ್ಕೂ ಹೆಚ್ಚು ನಿವಾ ಸಿಗಳ ಮನೆಗೆ ತೆರಳಿ ಇ-ಸ್ವತ್ತು ವಿತರಿಸಲಾಯಿತು.
ಗ್ರಾಪಂ ಗೀತಾ ಮಾತನಾಡಿ,ಹೊಸದಾಗಿ ಜಾರಿಗೊಳಿಸಿರುವ ಈ ಕಾರ‌್ಯಕ್ರಮದಿಂದ ವಿಳಂಬ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಬೀಳ ಲಿದೆ. 15 ದಿನಗಳಲ್ಲಿ ಅಂದಾಜು 4 ಲಕ್ಷ ರೂ.ತೆರಿಗೆ ಸಂಗ್ರಹವಾಗಿದೆ ಎಂದರು. ಜಿಪಂ ಉಪಕಾರ‌್ಯದರ್ಶಿ ಡಾ.ರಂಗಸ್ವಾಮಿ,ಇಒ ಹನು ಮಂತಪ್ಪ,ಗ್ರಾಪಂ ಉಪಾಧ್ಯಕ್ಷ ನಿಂಗಪ್ಪ,ಪಿಡಿಒ ಪಾತಣ್ಣ,ಸದಸ್ಯರಾದ ಶಂಕರಮ್ಮ,ಕಲ್ಲೇಶಯ್ಯ,ಮಲ್ಲಿಕಾರ್ಜುನ,ಹನುಮಂತಪ್ಪ,ರಾಮಾಂಜ ನೇಯ,ಬೈಯಣ್ಣ, ಮಾರುತಿ, ಕಮಲಮ್ಮ,ಮಂಜುಳಾ,ತಿಮ್ಮರಾಜು, ಪಾಲಾಕ್ಷಮ್ಮ,ಮಾಲಾನಬೀ, ಗ್ರಾಮಸ್ಥರು,ಪ್ರಮುಖರು ಇದ್ದರು.