ಬೃಂದಾವನ ವ್ಯಾಪಾರಿಗಳೊಂದಿಗೆ ಡಿವೈಎಸ್ಪಿ ಸಭೆ

04-10---krs1 (2)
ಕೆ.ಆರ್.ಸಾಗರ ಪೊಲೀಸ್ ಠಾಣಾ ವತಿಯಿಂದ ಡಿ.ವೈ.ಎಸ್.ಪಿ ಮುರಳಿ ಅಧ್ಯಕ್ಷತೆಯಲ್ಲಿ ವಿಶ್ವ ವಿಖ್ಯಾತ ಬೃಂದಾವನದ ಬಳಿ ವ್ಯಾಪಾರ ಮಾಡುವವರ ಸಭೆ ನಡೆಸಲಾದ ಸಭೆಯಲ್ಲಿ ಪಿ.ಎಸೈ ಬಸವರಾಜು ಮತ್ತು ರಸ್ತೆ ವ್ಯಾಪಾರಸ್ಥರು ಇರುವ ಚಿತ್ರ.
Published on

ಕೆ.ಆರ್.ಸಾಗರ: ಕೆ.ಆರ್.ಸಾಗರ ಪೊಲೀಸ್ ಠಾಣಾಯಲ್ಲಿ ಡಿವೈಎಸ್‌ಪಿ ಮುರಳಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೃಂದಾವನದ ಬಳಿ ವ್ಯಾಪಾರ ಮಾಡುವವರ ಜತೆ ಸಭೆ ನಡೆಸಲಾಯಿತು.

ಬೃಂದಾವನದ ಬಳಿ ವ್ಯಾಪಾರ ಮಾಡುವವರು ಪ್ರವಾಸಿಗರಿಗೆ ತೊಂದರ ನೀಡಬಾರದು. ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆದು ವ್ಯಾಪಾರ ಮತ್ತು ಅಸಭ್ಯವಾಗಿ ವರ್ತನೆ ಮಾಡುತ್ತಿರುವ ಬಗ್ಗೆ ಯಾವುದೇ ದೂರು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅನುಮಾನಸ್ಪದ ವ್ಯಕ್ತಿಗಳ ನಡವಳಿಕೆ ಕಂಡು ಬಂದರೆ ತಕ್ಷಣ ಸಮೀಪದ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮುರಳಿ ಕೋರಿದರು.

ಪಿಎಸ್‌ಐ ಬಸವರಾಜು, ಸರ್.ಎಂ.ವಿಶ್ವಶೇರಯ್ಯ ರಸ್ತೆ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಾರಾಯಣ, ಮೋಹನ, ರಫೀಕ್, ಕುಮಾರ್, ಪುರಷೋತ್ತಮ, ಅನೀಲ್, ಪ್ರಮೋದ, ಶಿವಮ್ಮ, ನಾಗಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net