

ಬೆಂಗಳೂರು: ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಅಕ್ರಮದ ವಹಿವಾಟು ನೇಮಕಾತಿ ವಿಭಾಗದ ಕಚೇರಿಯಲ್ಲೇ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಪರೀೆಗೆ ಒಂದು ದಿನ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ ಜತೆಗೆ, ಡೀಲ್ ಕುದುರಿದ ನಂತರ ಅಭ್ಯರ್ಥಿಗಳು ಬರೆದ ಒಎಂಆರ್ ಶೀಟ್ಗಳನ್ನು ಅಧಿಕಾರಿಗಳ ಕಚೇರಿಯಲ್ಲೇ ತಿದ್ದಿರುವುದಕ್ಕೆ ಸಿಐಡಿಗೆ ಪ್ರಾಥಮಿಕ ಸಾಾಧಾರ ಸಿಕ್ಕಿದೆ. ಹಗರಣ ಬೆಳಕಿಗೆ ಬಂದ ಕೂಡಲೇ ಎತ್ತಂಗಡಿಯಾದ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಸೇರಿ ಹಲವು ಅಧಿಕಾರಿಗಳ ವಿರುದ್ಧ ಅಕ್ರಮಕ್ಕೆ ಸಹಕಾರ ನೀಡಿರುವ ಆರೋಪ ಕೇಳಿಬಂದ ಬೆನ್ನಲ್ಲೇ, ಕಲಬುರಗಿ ವಿಭಾಗದ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ಒಬ್ಬರು ಬುಧವಾರ ಅಮಾನತುಗೊಂಡಿರುವುದು ಪ್ರಕರಣದಲ್ಲಿ ಅಧಿಕಾರಿಗಳ ಕಳ್ಳಾಟದ ಕುರಿತು ಮತ್ತಷ್ಟು ಬೆಳಕು ಚೆಲ್ಲಿದೆ.
ಏನೆಲ್ಲ ಸಾಕ್ಷ$್ಯ ಲಭ್ಯ?: ಬೆಂಗಳೂರಿನ ಸಿಐಡಿ ಕಚೇರಿ ಆವರಣದಲ್ಲಿರುವ ಪೊಲೀಸ್ ನೇಮಕಾತಿ ವಿಭಾಗದಲ್ಲೇ ಅಕ್ರಮ ನಡೆದಿರುವುದಕ್ಕೆ ಕೆಲ ಸಾ$್ಯಗಳು ಲಭಿಸಿವೆ. ಅಭ್ಯರ್ಥಿಗಳ ವಿಚಾರಣೆ ಸಂದರ್ಭದಲ್ಲಿ ನೇಮಕಾತಿ ವಿಭಾಗದಲ್ಲಿರುವ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಪುತ್ರರ ಹೆಸರನ್ನು ಹೇಳಿದ್ದಾರೆ. ಅಭ್ಯರ್ಥಿಗಳ ಹೇಳಿಕೆ ಆಧರಿಸಿ ತನಿಖೆ ಮುಂದುವರಿದಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ ಎಲ್ಲ ಅಭ್ಯರ್ಥಿಗಳ ಒಎಂಆರ್ ಶೀಟ್ ಕಾರ್ಬನ್ ಪ್ರತಿ ಹಾಗೂ ಮೂಲ ಉತ್ತರ ಪತ್ರಿಕೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಭ್ಯರ್ಥಿಗಳಿಂದ ತೆಗೆದುಕೊಂಡಿರುವ ಒಎಂಆರ್ ಶೀಟ್ ಕಾರ್ಬನ್ ಪ್ರತಿಯಲ್ಲಿರುವ ಪ್ರಶ್ನೆಗಳ ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಮೂಲ ಉತ್ತರ ಪತ್ರಿಕೆಯಲ್ಲಿ ಉತ್ತರ ತಿದ್ದಿರುವುದು ಬೆಳಕಿಗೆ ಬಂದಿದೆ.
ಅಧಿಕಾರಿಗಳ ಕೃತ್ಯ: ಅರ್ಜಿ ಆಹ್ವಾನಿಸಿದ ಬಳಿಕ ಏಜೆಂಟ್ಗಳು ಡೀಲ್ ಕುದುರಿಸಿದ್ದಾರೆ. ನಂತರ ರಾಜಕೀಯ ಮುಖಂಡರು , ಅಧಿಕಾರಿಗಳ ಮುಖೇನ ಅಕ್ರಮ ಎಸಗಿದ್ದಾರೆ. ಹಣ ಕೊಟ್ಟವರ ಹೆಸರು, ನೋಂದಣಿ ಸಂಖ್ಯೆ, ಮೊಬೈಲ್ ನಂಬರ್ ಪಡೆದ ಏಜೆಂಟ್ಗಳು ನೇಮಕಾತಿ ವಿಭಾಗದ ಪ್ರಧಾನ ಕಚೇರಿಗೆ ಪಟ್ಟಿ ಕಳುಹಿಸಿದ್ದಾರೆ. ಬೇಕಾದ ಪರೀಾ ಕೇಂದ್ರಕ್ಕೆ ಅಭ್ಯರ್ಥಿ ನೋಂದಣಿ ಸಂಖ್ಯೆ ಬರುವಂತೆ ಮಾಡಿದ್ದಾರೆ. ಪರೀೆಯ ಹಿಂದಿನ ದಿನವೇ ಅಧಿಕಾರಿಗಳೇ ಪ್ರಶ್ನೆ ಪತ್ರಿಕೆ ಮೊಬೈಲ್ನಲ್ಲಿ ೋಟೋ ಸೆರೆಹಿಡಿದು ಏಜೆಂಟ್ಗಳಿಗೆ ಕಳುಹಿಸಿದ್ದಾರೆ. ಅದಕ್ಕೆ ಸರಿ ಉತ್ತರ ಕೊಟ್ಟು ಮಾರನೇ ದಿನ ನಿಗದಿತ ಪರೀಾ ಕೊಠಡಿಯಲ್ಲಿ ಅಭ್ಯರ್ಥಿಗಳಿಗೆ ಬ್ಲೂಟೂತ್ನಲ್ಲಿ ಉತ್ತರ ಬರೆಸಿರುವುದು ಗೊತ್ತಾಗಿದೆ.
ತಾವೇ ತಿದ್ದಿ ಸೀಲ್: ಮೊದಲೇ ಸೂಚಿಸಿರುವಂತೆ ಅಭ್ಯರ್ಥಿಗಳು ಒಎಂಆರ್ ಶೀಟ್ ಖಾಲಿ ಬಿಟ್ಟು ಬಂದಿದ್ದಾರೆ. ಕೇಂದ್ರದ ಮೇಲ್ವಿಚಾರಕರು ಶೀಟ್ ಪ್ಯಾಕ್ ಮಾಡಿ ಸೀಲ್ ಮಾಡಿ ಪ್ರಧಾನ ಕಚೇರಿಗೆ ರವಾನಿಸಬೇಕು. ಆದರೆ, ಕೆಲವು ಸೆಂಟರ್ಗಳಲ್ಲಿ ಮೇಲ್ವಿಚಾರಕರೇ ಅಭ್ಯರ್ಥಿಯ ಒಎಂಆರ್ ಶೀಟ್ ತೆಗೆದು ಸರಿ ಉತ್ತರ ಬರೆದು ನಂತರ ಕಳುಹಿಸಿದ್ದಾರೆ. ಕೆಲ ಕೇಂದ್ರಗಳಲ್ಲಿ ಖಾಲಿ ಉತ್ತರ ಪತ್ರಿಕೆ ನೇಮಕಾತಿ ವಿಭಾಗಕ್ಕೆ ಬಂದ ಮೇಲೆ ನಿಗದಿತ ಅಭ್ಯರ್ಥಿಗಳ ಒಎಂಆರ್ ಶೀಟ್ ಬದಲಾವಣೆ ಮತ್ತು ತಿದ್ದುಪಡಿ ಮಾಡಿದ್ದಾರೆ. ಪ್ರತಿ ಅಭ್ಯರ್ಥಿಗಳ ಕಾರ್ಬನ್ ಶೀಟ್, ಒಎಂಆರ್ ಶೀಟ್ ಪಡೆದು ತಾಳೆ ಮಾಡಿದಾಗ ಸಾಕಷ್ಟು ವ್ಯತ್ಯಾಸ ಕಂಡು ಬಂದಿವೆ. ಬೇರೆ ಪೆನ್ ಬಳಸಿರುವುದು, ಬರವಣಿಗೆ ಬದಲಾಗಿರುವುದು, ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಿರುವುದರಿಂದ ಸಿಕ್ಕಿಬಿದ್ದಿದ್ದಾರೆ.
ಹಲವು ವರ್ಷಗಳಿಂದ ಠಿಕಾಣಿ: ನೇಮಕಾತಿ ವಿಭಾಗದಲ್ಲಿ 50 & 60 ಸಿಬ್ಬಂದಿ ಇದ್ದಾರೆ. ಈ ಹಿಂದೆ ಕಾನ್ಸ್ಟೇಬಲ್ ಹುದ್ದೆ ನೇಮಕ ಹಗರಣ ಬೆಳಕಿಗೆ ಬಂದಾಗ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದ ಎಸ್ಡಿಎ ಮತ್ತು ಎ್ಡಿಎ ಸಿಬ್ಬಂದಿ ಎತ್ತಂಗಡಿ ಮಾಡಲಾಗಿತ್ತು. ಆದರೆ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಿರಲಿಲ್ಲ. ಕೆಲ ಅಧಿಕಾರಿಗಳು ರಾಜಕೀಯ ಪ್ರಭಾವ ಬೀರಿ ಅಲ್ಲೇ ಉಳಿದುಕೊಂಡಿದ್ದರು. 12 ವರ್ಷಗಳಿಂದ ನೇಮಕಾತಿ ವಿಭಾಗ ದಲ್ಲೇ ಸೇವೆ ಸಲ್ಲಿಸುತ್ತಿದ್ದ ಡಿವೈಎಸ್ಪಿ ಶಾಂತಕುಮಾರ್ ಎಲ್ಲ ರಾಜಕಾರಣಿಗಳಿಗೂ ಆತ್ಮೀಯರಾಗಿದ್ದರು ಎಂದು ಹೇಳಲಾಗುತ್ತಿದೆ.
ಸಿಐಡಿಗೆ ವಕೀಲರ ನಿಯೋಗ ದೂರು: ಎಸ್ಐ ನೇಮಕಾತಿ ಮತ್ತು ಸಹಾಯಕ ಪ್ರಾಧ್ಯಾಪಕ ನೇಮಕಾತಿ ಅಕ್ರಮ ಪ್ರಕರಣಗಳಲ್ಲಿ ಮಾಜಿ ಸಿಎಂ ಪುತ್ರ ಮತ್ತು ಉನ್ನತ ಶಿಕ್ಷಣ ಸಚಿವರ ಕೈವಾಡ ಇರುವುದಾಗಿ ಆರೋಪಿಸಿ ಜೆಡಿಎಸ್ ಮುಖಂಡ ವಕೀಲ ಎ.ಪಿ.ರಂಗನಾಥ್ ನೇತೃತ್ವದ ನಿಯೋಗ ಸಿಐಡಿಗೆ ದೂರು ಸಲ್ಲಿಸಿದೆ. ಪ್ರಕರಣದಲ್ಲಿ ಮಾಜಿ ಸಿಎಂ ಪುತ್ರ, ಹಾಲಿ ಸಚಿವರು, ಐಪಿಎಸ್ ಅಧಿಕಾರಿ, ಹಲವು ಪ್ರಭಾವಿಗಳು ಭಾಗಿಯಾಗಿದ್ದಾರೆ. ದುರುದ್ದೇಶದಿಂದ ನೇಮಕಾತಿ ವಿಭಾಗಕ್ಕೆ ಎಡಿಜಿಪಿ ಅಮೃತ್ ಪೌಲ್ರನ್ನು ಮಾಜಿ ಸಿಎಂ ಪುತ್ರ ನಿಯೋಜಿಸಿಕೊಂಡಿದ್ದರು. 63 ಅಭ್ಯರ್ಥಿಗಳಿಂದ ಹಣ ಪಡೆದು ಆಯ್ಕೆ ಮಾಡಿದ್ದಾರೆ. ಪ್ರತಿಯೊಬ್ಬರಿಂದ 60 ರಿಂದ 80 ಲಕ್ಷ ರೂ. ವಸೂಲಿ ಮಾಡಿದ್ದಾರೆ ಎಂದು ರಂಗನಾಥ್ ಆರೋಪಿಸಿದ್ದಾರೆ.
ರ್ಖಗೆಗೆ 3ನೇ ನೋಟಿಸ್
ಶಾಸಕ ಪ್ರಿಯಾಂಕ್ ರ್ಖಗೆಗೆ ಗುರುವಾರ ವಿಚಾರಣೆಗೆ ಬರುವಂತೆ 3ನೇ ಬಾರಿಗೆ ನೋಟಿಸ್ ಜಾರಿ ಮಾಡಿದೆ. ತಮ್ಮ ಬಳಿ ಅಕ್ರಮದ ಪುರಾವೆಗಳಿವೆ ಎಂದು ಹೇಳಿಕೆ ನೀಡಿದ್ದರು. ಇಬ್ಬರು ಆರೋಪಿಗಳ ನಡುವೆ ಎಸ್ಐ ಹುದ್ದೆಯ "ಡೀಲ್' ಮಾತುಕತೆ ಆಡಿಯೋ ಬಿಡುಗಡೆ ಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಹಿತಿ ನೀಡುವಂತೆ ಸಿಐಡಿ ಸೂಚಿಸಿದೆ.
ಹೇಗಿರುತ್ತೆ ನೇಮಕಾತಿ?
ಖಾಲಿ ಹುದ್ದೆ ನೇಮಕಾತಿಗೆ ಅನುಮತಿ ಸಿಕ್ಕ ಕೂಡಲೇ ಪೊಲೀಸ್ ನೇಮಕಾತಿ ವಿಭಾಗ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಕೆ ದಿನಾಂಕ, ಹುದ್ದೆ ಹಂಚಿಕೆ ನಿರ್ಧರಿಸುತ್ತದೆ. ದೈಹಿಕ ಸಹಿಷ್ಣುತೆ, ಲಿಖಿತ ಪರೀೆ ದಿನಾಂಕ ಘೋಷಿಸಲಾಗುತ್ತದೆ. ಸಿಎಆರ್, ಡಿಎಆರ್ ಅಧಿಕಾರಿಗಳು ದೈಹಿಕ ಸಹಿಷ್ಣುತೆ ಪರೀೆ ನಡೆಸಿದರೆ ಸ್ಥಳಿಯ ಪೊಲೀಸರ ಸಹಾಯದಿಂದ ಪರೀಾ ಕೇಂದ್ರಗಳನ್ನು ಗುರುತಿಸಿ ಲಿಖಿತ ಪರೀೆಯನ್ನು ನಡೆಸಲಾಗುತ್ತದೆ. ನಿಗದಿತ ದಿನಾಂಕದಂದು ಲಿಖಿತ ಪರೀೆ ನಡೆಸಲಿದ್ದು, ಪ್ರಶ್ನೆ ಪತ್ರಿಕೆಯನ್ನು ನೇಮಕಾತಿ ವಿಭಾಗವೇ ತಜ್ಞರ ಸಮಿತಿಯಿಂದ ತಯಾರಿಸಿ ಪೂರೈಸುತ್ತದೆ. ಕಂಪ್ಯೂಟರ್ನಲ್ಲಿ ಮೌಲ್ಯಮಾಪನ ನಡೆಸಿ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಿ ಆಯಾ ವಿಭಾಗಕ್ಕೆ ರವಾನಿಸಲಿದೆ. ಆಯಾ ಟಕಗಳು ಸಿಂಧುತ್ವ ಪರೀೆ ನಡೆಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಿ ನೇಮಕಾತಿ ಪ್ರಮಾಣ ಪತ್ರ ಕೊಡಲಿವೆ.
ತನಿಖೆಗೆ ಆಗ್ರಹ: ಎಸ್ಐ ನೇಮಕಾತಿ ಅಕ್ರಮ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಹನುಮೇಗೌಡ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗೆ ಮನವಿ ಪತ್ರ ನೀಡಿದ್ದಾರೆ.
ಸೋರಿಕೆಗೆ ತಾಂತ್ರಿಕ ಕಾರಣ
545 ಎಸ್ಐ ನೇಮಕಾತಿಗೆ 2021ರ ಸೆ.26ಕ್ಕೆ ಲಿಖಿತ ಪರೀೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಅ.3ಕ್ಕೆ ದಿನಾಂಕ ಬದಲಾಯಿಸಿದ್ದರು. ಆ ಸಮಯದಲ್ಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಅನುಮಾನವಿತ್ತು. ಅಧಿಕಾರಿಗಳು ಮಾತ್ರ ತಾಂತ್ರಿಕ ತೊಂದರೆ ಎಂದಷ್ಟೇ ಸ್ಪಷ್ಟನೆ ಕೊಟ್ಟು ಕೈತೊಳೆದುಕೊಂಡರು.
ಇಬ್ಬರು ಅಮಾನತು
ಕಲಬುರಗಿ ಪರೀಾ ಕೇಂದ್ರ, ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಮೇಲ್ವಿಚಾರಕರಾಗಿದ್ದ ಕಲಬುರಗಿ ಬೆರಳಚ್ಚು ವಿಭಾಗದ ಡಿವೈಎಸ್ಪಿ ಆರ್.ಆರ್. ಹೊಸಮನಿ ಮತ್ತು ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ದಿಲೀಪ್ ಸಾಗರ್ರನ್ನು ಅಮಾನತುಗೊಳಿಸಲಾಗಿದೆ. ಅಭ್ಯರ್ಥಿಗಳು ಬ್ಲೂಟೂತ್ ಬಳಸಲು ಮತ್ತು ಪರೀೆ ಅವಧಿ ಮುಗಿದ ನಂತರವೂ ಓಎಂಆರ್ ಶೀಟ್ ತಿದ್ದಲು ಅವಕಾಶ ಮಾಡಿಕೊಟ್ಟಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿದೆ.
ಪರೀಾ ಕೇಂದ್ರ ನೌಕರರ ಮಾಹಿತಿ ಯಾಚನೆ
| ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ
545 ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಅಕ್ರಮದ ಜಾಲ ರಾಜ್ಯವ್ಯಾಪಿ ಹಬ್ಬಿರುವ ಶಂಕೆ ಬೆನ್ನಲ್ಲೇ ಸಿಐಡಿ ತಂಡ ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳು, ಪರೀಕ್ಷಾ ಮೇಲ್ವಿಚಾರಕರು ಮತ್ತು ಸಿಬ್ಬಂದಿಯ ಪೂರ್ಣ ಮಾಹಿತಿ ಕೇಳಿದೆ. ಪರೀಕ್ಷೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೈಸೂರು, ಮಂಗಳೂರು, ಕಲಬುರಗಿ, ಹುಬ್ಬಳ್ಳಿ, ದಾವಣಗೆರೆ ಇನ್ನಿತರ ನಗರಗಳಲ್ಲಿ ನಡೆದಿತ್ತು. ಈ ಪರೀಕ್ಷೆಗೆ 54,289 ಅಭ್ಯರ್ಥಿಗಳು ಹಾಜರಾಗಿದ್ದರು. ಹುಬ್ಬಳ್ಳಿ ನಗರದಲ್ಲೇ 20 ಪರೀಕ್ಷಾ ಕೇಂದ್ರಗಳಿದ್ದವು. ಇಂಥ ಕೇಂದ್ರಗಳ ಪರಿಪೂರ್ಣ ಮಾಹಿತಿ ಒದಗಿಸುವಂತೆ ಸಿಐಡಿಯು ಪೊಲೀಸ್ ನೇಮಕಾತಿ ವಿಭಾಗಕ್ಕೆ ತಿಳಿಸಿದೆ. ಪರೀಕ್ಷಾ ಕೇಂದ್ರಗಳು ಎಲ್ಲೆಲ್ಲಿ ಇದ್ದವು? ಯಾವ ಶಿಕ್ಷಣ ಸಂಸ್ಥೆ ? ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಯಾರಿದ್ದರು? ಅವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿ ಮಾಹಿತಿ ಕೇಳಿದೆ. ಇದಲ್ಲದೆ, ಪರೀಕ್ಷಾ ಕೇಂದ್ರದಲ್ಲಿ ಕೆಲಸ ನಿರ್ವಹಿಸಿದ ಇತರ ಸಿಬ್ಬಂದಿ ಹಾಗೂ ಜವಾನರ ಮಾಹಿತಿಯನ್ನೂ ಕೇಳಲಾಗಿದೆ. ಪ್ರತಿ 400 ಪರೀಕ್ಷಾರ್ಥಿಗಳಿಗೆ ಒಬ್ಬರಂತೆ ಎಸಿಪಿ (ಸಹಾಯಕ ಪೊಲೀಸ್ ಕಮೀಷನರ್) ಹಂತದ ಮತ್ತು ಇನ್ಸ್ಪೆಕ್ಟರ್ ನೇಮಿಸುವಂತೆ ನೇಮಕಾತಿ ವಿಭಾಗದ ಎಡಿಜಿಪಿ ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕಮಿಷನರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದರು. ಈ ರೀತಿಯಲ್ಲೇ ಪರೀಕ್ಷಾ ಕರ್ತವ್ಯಕ್ಕೆ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಇವರ ಮಾಹಿತಿಯನ್ನೂ ನೇಮಕಾತಿ ವಿಭಾಗ ಕೇಳಿದೆ. ಪರೀಕ್ಷಾ ಕೇಂದ್ರಗಳ ಅಧಿಕಾರಿಗಳು, ಮೇಲ್ವಿಚಾರಕರು, ಜವಾನರ ಮೂಲಕವೂ ಅಕ್ರಮ ನಡೆದಿದೆ ಎನ್ನುವ ಗುಮಾನಿ ಸಿಐಡಿಗೆ ಇದೆ. ಕೇವಲ ಕಲಬುರಗಿ, ಬೆಂಗಳೂರು ಅಷ್ಟೇ ಅಲ್ಲದೆ, ಇನ್ನಿತರ ಕೇಂದ್ರಗಳಲ್ಲಿಯೂ ಅಕ್ರಮ ನಡೆದಿರುವ ಸಂದೇಹ ವ್ಯಕ್ತ ವಾಗಿದ್ದು, ಈ ನಿಟ್ಟಿನಲ್ಲೂ ಸಿಐಡಿ ತನಿಖೆ ಆರಂಭಿಸಿರುವುದು ಗಮನಾರ್ಹ.