ಡಿವೈಎಫ್‌ಐ 14 ನೇ ಜಿಲ್ಲಾ ಸಮ್ಮೇಳನದ ಲಾಂಛನ ಅನಾವರಣ

mng--21 sep DYFI logo
Published on

ಮಂಗಳೂರು: ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ, ಜಾತ್ಯಾತೀತತೆ, ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ ಎಂಬ ಘೋಷಣೆಯಡಿ ಡಿವೈಎಫ್‌ಐ ಯುವಜನ ಸಂಘಟನೆಯ 14ನೇ ದ.ಕ ಜಿಲ್ಲಾ ಸಮ್ಮೇಳನವು ಅ. 15 ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಗುರುವಾರ ಲಾಂಛನ ಅನಾವರಣ ಮಾಡಲಾಯಿತು.


ಡಿವೈಎಫ್‌ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕೋಶಾಧಿಕಾರಿ ಮನೋಜ್ ವಾಂಮಜೂರು, ಪದಾಧಿಕಾರಿಗಳಾದ ರಫೀಕ್ ಹರೇಕಳ, ನವೀನ್ ಕೊಂಚಾಡಿ, ನಿತಿನ್ ಕುತ್ತಾರ್ , ಆಶಾ ಬೋಳೂರು, ಸುನಿಲ್ ತೇವುಲ, ತಯ್ಯೂಬ್ ಬೆಂಗರೆ, ಶ್ರೀನಾಥ್ ಕಾಟಿಪಳ್ಳ, ಚರಣ್ ಶೆಟ್ಟಿ, ರಿಯಾಝ್ ಮೂಡಬಿದ್ರೆ, ರಿಜ್ವಾನ್ ಹರೇಕಳ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net