

ಕವಿತಾಳ: ಸಮೀಪದ ಅಮೀನಗಡದಲ್ಲಿ ಶ್ರೀ ದ್ಯಾವಮ್ಮ ದೇವಿ ಜಾತ್ರೆ ಅಂಗವಾಗಿ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ಶುಕ್ರವಾರ ಜರುಗಿತು.
ನಾಲ್ಕು ವರ್ಷಕ್ಕೊಮ್ಮೆ ನಡೆಯುವ ದ್ಯಾವಮ್ಮ ದೇವಿ ಜಾತ್ರೆ ಅಂಗವಾಗಿ ಸುಮಂಗಲೆಯರು, ಜೋಗುತಿಯರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಗ್ರಾಮದ ಈರಪ್ಪ ಮೇಟಿ ಅವರ ಮನೆಗೆ ತೆರಳಿ ದೇವಿ ಜಾತ್ರೆ ಕಾರ್ಯಕ್ರಮಕ್ಕೆ ದೈವದ ಸಮ್ಮುಖದಲ್ಲಿ ಆಹ್ವಾನ ನೀಡಲಾಯಿತು. ಅಲ್ಲಿಂದ ಗಂಗಾಸ್ಥಳಕ್ಕೆ ಕರೆತಂದು ನಂತರ ದೇವಸ್ಥಾನದವರೆಗೆ ಮೆರವಣಿಗೆ ಮಾಡಲಾಯಿತು. ನಂತರ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಭಕ್ತರು ಹರಕೆ ಸಮರ್ಪಿಸಿದರು.
ಶರಣೆ ಬಸವಲಿಂಗಮ್ಮ ಅಮ್ಮ, ದೇವಯ್ಯಸ್ವಾಮಿ ಹಿರೇಮಠ, ಅಮರನಾಥಸ್ವಾಮಿ, ಗ್ರಾಪಂ ಅಧ್ಯಕ್ಷೆ ಬಸವಲಿಂಗಮ್ಮ, ನರಸಪ್ಪ ಪೂಜಾರಿ, ಬಿಜೆಪಿ ಜಿಲ್ಲಾ ಮುಖಂಡ ವಿಶ್ವನಾಥರಡ್ಡಿ ಗೌಡ, ಮಾಜಿ ಗ್ರಾಪಂ ಅಧ್ಯಕ್ಷ ಅಮರೆಗೌಡ, ಅಬ್ದುಲ್ ಕೈಮ್‌ಸಾಬ್ ಗುಡಗುಂಟಿ, ಮಾಜಿ ಗಾಪಂ ಸದಸ್ಯ ಶಫಿಕ್ ಗುಡಗುಂಟಿ, ಪ್ರಮುಖರಾದ ಮೌನೇಶ ದೊಡ್ಡಮನಿ, ಆಲಂಸಾಬ್ ಬಂಕದ್, ನರಸಪ್ಪ ಪೂಜಾರಿ, ಬುಡ್ಡಪ್ಪ ಹರಿಜನ, ಮಹಾದೇವ ಹರಿಜನ, ಶ್ರೀನಿವಾಸ, ಹುಚ್ಚಪ್ಪತಾತಾ, ಬಸವರಾಜ ಜಿನ್ನಾ, ಬಸವರಾಜ ಮೇಟಿ, ಶಿವಪ್ಪ ಮೇಟಿ, ಈರಪ್ಪ ತಾತಾ, ಹನುಮರಡ್ಡಿ ನಾಯಕ, ಹುಚ್ಚಬುಡ್ಡ, ಇಮಾಮುಸಾಬ್, ಮಲ್ಲಪ್ಪ ಅಂಕುಶದೊಡ್ಡಿ ಇತರರಿದ್ದರು.