ದ್ಯಾವಮ್ಮ-ಚೌಡೇಶ್ವರಿ ದೇವಿ ಜಾತ್ರೆ ಅದ್ದೂರಿ

Manvi Fair
ದೇವಿಪುರ ಗ್ರಾಮದಲ್ಲಿ ದ್ಯಾವಮ್ಮ ಹಾಗೂ ಚೌಡೇಶ್ವರ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಮಾನ್ವಿ: ತಾಲೂಕಿನ ದೇವಿಪುರದಲ್ಲಿ ಗ್ರಾಮ ದೇವತೆಯರಾದ ದ್ಯಾವಮ್ಮ ದೇವಿ ಹಾಗೂ ಚೌಡೇಶ್ವರಿ ದೇವಿ ಜಾತ್ರೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಬೆಳಗ್ಗೆ ಗ್ರಾಮದ ಹತ್ತಿರದ ನದಿಯಲ್ಲಿ ಗಂಗೆ ಪೂಜೆ ನಡೆಸಿ ದೇವಿ ಮೂರ್ತಿಗಳಿಗೆ ಅಭಿಷೇಕ ನಡೆಸಲಾಯಿತು. ಹರಕೆ ಹೊತ್ತ ಭಕ್ತರು ಮನೆಗಳಿಂದ ಕುಂಭ ಹೊತ್ತು ತಂದು ದೇವಿಗೆ ನೈವೇದ್ಯ ಅರ್ಪಿಸಿದರು. ಮಹಿಳೆಯರು ಕಳಸ ಕುಂಭದೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ಗ್ರಾಮದೇವತೆಯರಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಯಿತು. ಸಂಜೆ ದೇವಿಯರ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ನಡೆಸಿ ನಂತರ ರಥದಲ್ಲಿ ಕೂಡಿಸಿ ರಥೋತ್ಸವ ಹಾಗೂ ಸಿಡಿಬಂಡಿ ಮಹೋತ್ಸವ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net