

ತಾಳಿಕೋಟೆ: ಪಟ್ಟಣದಲ್ಲಿ ದ್ಯಾಮವ್ವದೇವಿ ಹಾಗೂ ಮಾಯಮ್ಮದೇವಿ ಜಾತ್ರೆ ಡಿ. 20ರಿಂದ 24ರವರೆಗೆ ಜರುಗಲಿದೆ.
20 ರಂದು ನಸುಕಿನ ಜಾವ 5ಕ್ಕೆೆ ಗಂಗಸ್ಥಳ, ಬೆಳಗ್ಗೆ 8ಕ್ಕೆೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ನಂತರ ಕುಂಭ ಕಲಶ, ಸಕಲ ವಾದ್ಯ ಮೇಳಗಳೊಂದಿಗೆ ಭವ್ಯ ಮೆರವಣಿಗೆ ಜರುಗಲಿದೆ. ರಾತ್ರಿ 10ಕ್ಕೆ ಮಿಣಜಗಿಯ ಶ್ರೀದೇವಿ ನಾಟ್ಯ ಸಂದ ಕಲಾವಿದರಿಂದ ದೇವಿ ಮಹಾತ್ಮೆ ಬಯಲಾಟ ಪ್ರದರ್ಶನಗೊಳ್ಳಲಿದೆ.
21 ರಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಮೌಲಾಸಾಬ ಮಕಾನದಾರ, ಅವ್ವಮ್ಮ ಪೂಜಾರಿ ಅವರಿಂದ ಗೀಗೀ ಪದಗಳು ಜರುಗುವವು. ಸಂಜೆ 6ಕ್ಕೆ ಶ್ರೀ ಸಿದ್ಧಲಿಂಗೇಶ್ವರ ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ, ರಾತ್ರಿ 9ಕ್ಕೆ ಸಂಗೋಗಿ ಮಹಾರಾಜ ಭೀಮಾಶಂಕರ ಗಾಯನ ಸಂ ಮತ್ತು ಉತ್ನಾಳ ಪರಶುರಾಮ ಅವರಿಂದ ವಾದಿ&ಬೀದಿ ಗಾಯನ ನಡೆಯಲಿದೆ.
22 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2ರ ವರೆಗೆ ಗೀಗೀ ಪದ ಹಾಗೂ 2ರಿಂದ ಸಂಜೆ 4 ರ ವರೆಗೆ ಕನ್ನಡ ಜಾನಪದ ಪರಿಷತ್ ಜಿಲ್ಲಾ ಟಕದ ವತಿಯಿಂದ ಜಿಲ್ಲಾ ಜಾನಪದ ಉತ್ಸವ, ರಾತ್ರಿ 10ಕ್ಕೆ ರಾವೇಂದ್ರ ಮೆಲೋಡಿಸ್ನ ಜ್ಯೂ.ವಿಷ್ಣುವರ್ಧನ್, ಜ್ಯೂ.ರವಿಚಂದ್ರನ್ ಅವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಡುವರು. ರಾತ್ರಿ 11.30ಕ್ಕೆ ಪಗಡಿ ಪಂದ್ಯ ನಡೆಯಲಿದೆ.
ಪಗಡಿ ವಿಜೇತರಿಗೆ ಪ್ರಥಮ 50,001ರೂ., ದ್ವೀತಿಯ 25,001, ತೃತೀಯ 15001ರೂ., ಚತುರ್ಥ 6001ರೂ. ಬಹುಮಾನ ನೀಡಲಾಗುವುದು. 23 ರಂದು ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಬಾಗಲಕೋಟೆಯ ಬಯಲಾಟ ಅಕಾಡೆಮಿ ವತಿಯಿಂದ ಬಯಲಾಟ ವಿಚಾರ ಸಂಕಿರಣ, ಪ್ರದರ್ಶನ ಜರುಗಲಿದೆ. ರಾತ್ರಿ 9ಕ್ಕೆ ಬಸವನ ಬಾಗೇವಾಡಿಯ ಬಸವೇಶ್ವರ ಬಯಲಾಟ ಸಂದ ಕಲಾವಿದರಿಂದ ರೇಣುಕಾ ಯಲ್ಲಮ್ಮ ಮಹಾತ್ಮೆ ಬಯಲಾಟ ಪ್ರದರ್ಶನಗೊಳ್ಳಲಿದೆ.
24 ರಂದು ರಾತ್ರಿ 10ಕ್ಕೆ ದೇವಿ ಮಹಾತ್ಮೆ ಬಯಲಾಟ ಪ್ರದರ್ಶನ ನಡೆಯಲಿದೆ ಎಂದು ಜಾತ್ರಾ ಸಮಿತಿ ತಿಳಿಸಿದೆ.