ದ್ಯಾಮಾಂಭಿಕ ದೇವಿ ಜಾತ್ರೆ ಏ.9ರಿಂದ

5 Hanumasagara 1
ಹನುಮಸಾಗರದ ದ್ಯಾಮಾಂಭಿಕ ದೇವಿ ಜಾತ್ರೆ ನಿಮಿತ್ತ ಶುಕ್ರವಾರ ಪೂರ್ವ ಭಾವಿ ಸಭೆ ನಡೆಯಿತು. ಜಾತ್ರಾ ಕಮೀಟಿ ಸದಸ್ಯ ಸೂಚಪ್ಪ ದೇವರಮನಿ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಪ್ರಮುಖರಾದ ಅಂಬಸಾ ರಂಗ್ರೇಜ್, ಬಸವರಾಜ ಹಳ್ಳೂರ, ಮಂಜುನಾಥ ಹುಲ್ಲೂರ, ಶಿವಪ್ಪ ಕಂಪ್ಲಿ, ಮರೇಗೌಡ ಬೋದುರ, ತಿಮ್ಮನಗೌಡ ಮಾಲಿಪಾಟೀಲ್, ದ್ಯಾಮಣ್ಣ ಬಿಂಗಿ, ವೀರೇಶ ಕಟಗಿ, ನಾಗರಾಜ ಕಂದಗಲ್, ಚಾಂದಸಾಬ ಬಳೂಟಗಿ, ಶಿವು ಸಂಗಮದ, ಯಲ್ಲಪ್ಪ ಕುಂಬಳಿ, ನಾಗಪ್ಪ ಗೋನಾಳ, ದೇಗುಲದ ಅರ್ಚಕರು ಇದ್ದರು.
Published on

ಹನುಮಸಾಗರ: ಪಟ್ಟಣದ ದ್ಯಾಮಾಂಭಿಕ ದೇವಿ ಜಾತ್ರೆ ನಿಮಿತ್ತ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.

ಗಾಮದೇವತೆ ಜಾತ್ರಾ ಕಮೀಟಿ ಸದಸ್ಯ ಸೂಚಪ್ಪ ದೇವರಮನಿ ಮಾತನಾಡಿ, ಏ.9ರಂದು ಕುಂಭ ಹೊರಡಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಮೇ.10ರಂದು ಗ್ರಾಮದಲ್ಲಿ ಅಂಕಿಯನ್ನು ಹಾಕಲಾಗುವುದು.

ಅಂದಿನಿಂದ ಐದು ದಿನ ಸಾರ್ವಜನಿಕರು ಕುಟ್ಟುವದು ಹಾಗೂ ಬೀಸುವುದು, ಕೃಷಿ ಚಟುವಟಿಕೆಗಳು ನಡೆಸಬಾರದು. ಮೇ.13ರಂದು ಶ್ರೀ ದ್ಯಾಮಾಂಭಿಕ ದೇವಿಯನ್ನು ತವರು ಮನೆಗೆ ಕಳುಹಿಸಿ, ಮೇ.14ರಂದು ಗಂಡನ ಮನೆಗೆ ಕರೆತರಲಾಗುವುದು. ಮೇ.17ರಂದು ದೇವತೆಗೆ ಉಡಿ ತುಂಬುವ ಕಾರ್ಯದ ಮೂಲಕ ಒಂದು ವಾರದ ಜಾತ್ರೆಗೆ ತೆರೆ ಏಳೆಯಲಾಗುವುದು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಪ್ರಮುಖರಾದ ಅಂಬಸಾ ರಂಗ್ರೇಜ್, ಬಸವರಾಜ ಹಳ್ಳೂರ, ಮಂಜುನಾಥ ಹುಲ್ಲೂರ, ಶಿವಪ್ಪ ಕಂಪ್ಲಿ, ಮರೇಗೌಡ ಬೋದುರ, ತಿಮ್ಮನಗೌಡ ಮಾಲಿಪಾಟೀಲ್, ದ್ಯಾಮಣ್ಣ ಬಿಂಗಿ, ವೀರೇಶ ಕಟಗಿ, ನಾಗರಾಜ ಕಂದಗಲ್, ಚಾಂದಸಾಬ ಬಳೂಟಗಿ, ಶಿವು ಸಂಗಮದ, ಯಲ್ಲಪ್ಪ ಕುಂಬಳಿ, ನಾಗಪ್ಪ ಗೋನಾಳ, ದೇಗುಲದ ಅರ್ಚಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net